ರೋಹಿತ್ ಮೇಮುಲ ಆತ್ಮಹತ್ಯೆ. ಕುಂದಾಪುರ ದಸಂಸ ಪ್ರತಿಭಟನೆ

Call us

Call us

ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ರೋಹಿತ್ ಸಾವಿಗೆ ಕಾರಣರಾದ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.

Call us

Call us

Visit Now

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿಂತಕ ಜಯನ್ ಮಲ್ಪೆ ಮಾತನಾಡಿ, ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ಮೇಮುಲ ಆತ್ಮಹತ್ಯೆ ದೇಶದಲ್ಲಿ ದಲಿತರ ಸ್ಥಿತಿ ಯಾವಮಟ್ಟದಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ಧಮನ ನೀತಿಯಿಂದ ದಲಿತರ ದ್ವನಿ ಅಡಗಿಸುವ ಕೆಲಸ ಆಗುತ್ತಿದೆ ಎಂದರು. ದೇಶದ ಎಲ್ಲಾ ವಿವಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವರ ವಿರುದ್ಧ ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕು. ಘಟನೆಗೆ ಕಾರಣರಾದ ವ್ಯಕ್ತಿಗಳ ಮೇಲೆ ಇದೂವರೆಗೆ ಕ್ರಮ ತೆಗೆದು ಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

Click here

Call us

Call us

ಪತ್ರಕರ್ತರಾದ ಶಶಿಧರ ಹೆಮ್ಮಾಡಿ, ಜಾನ್ ಡಿಸೋಜಾ ಘಟನೆ ಖಂಡಿಸಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ವಾಸುದೇವ ಮದೂರು, ರಾಜ ಬೆಟ್ಟಿನಮನೆ, ಶ್ಯಾಮರಾಜ್ ಬಿರ್ತಿ, ಸುಂದರ ಕುಪ್ಪೆಟ್ಟು, ವಿಠಲ ನಕ್ರೆ, ವಾಸು ನೇಜಾರು, ಸಂದೇಶ್ ಬಾರ್ಕೂರು, ಸುರೇಶ್ ಉಳ್ಳೂರು, ಚಂದ್ರ ಹಳ್ಳಿಗೇರಿ ಮುಂತಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ನ್ಯಾಯವಾದಿ ಮಂಜುನಾಥ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು.

Leave a Reply

Your email address will not be published. Required fields are marked *

10 + one =