ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹಲವು ತಿರುವು ತಿರುಳುಗಳನ್ನು ಕಂಡ ರಂಗಭೂಮಿ ಲಾವಣ್ಯದಂತಹ ಸಂಸ್ಥೆಗಳಿಂದಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಜನರ ಅಭಿಮಾನದ ಹೊಸ ಲಾವಣ್ಯ ಚಿರನೂತನವಾಗಲಿ ಎಂದು ಉಡುಪಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೆ.ಸಿ. ರಾಜೇಶ್ ಹೇಳಿದರು.
ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ ಸಂಭ್ರಮದ ಅಂಗವಾಗಿ ಜರುಗುತ್ತಿರುವ ರಂಗ ಲಾವಣ್ಯ – ಕಲಾಮಹೋತ್ಸವ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು.
ಲಾವಣ್ಯದ ಸ್ಥಾಪಕಾಧ್ಯಕ್ಷ ಯು ಶ್ರೀನಿವಾಸ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ರಾಜೇಂದ್ರ ಹೆಜ್ಜಾಲು, ರಾಹುಲ್ ಹೊಳ್ಳ, ಈಶ್ವರ ನಾಯ್ಕ್ ಭಟ್ಕಳ, ಮಹಮ್ಮದ್ ಇರ್ಷಾದ್ ಸಾಹೇಬ್, ಆರ್.ಡಿ. ಟೈಲರ್, ಪ್ರೀಯದರ್ಶಿನಿ ಕಮಲೇಶ್ ಬೆಸ್ಕೂರು ಮೊದಲಾದವರು ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ. ಉಪಸ್ಥಿತರಿದ್ದರು.
ಲಾವಣ್ಯದ ಕಲಾವಿದರುಗಳಾದ ರಾಮಚಂದ್ರ ಹೇನಬೇರು, ದಯಾನಂದ ಪಿ, ಆನಂದ ಗಾಣಿಗ, ಕೃಷ್ಣ ಬಾಳೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ನಾಗೇಂದ್ರ ಬಂಕೇಶ್ವರ್ ಸನ್ಮಾನಿತರನ್ನು ಪರಿಚಿಯಿಸಿದರು. ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.