ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಲ್ಲಿನ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಸಾಂಸ್ಕೃತಿಕ ಸಂಘಟನೆಗಳು ಹಮ್ಮಿಕೊಳ್ಳುವ ಬೆಸಿಗೆ ಶಿಬಿರಗಳು ಅವರನ್ನು ಮಾನಸಿಕವಾಗಿ ಸದೃಡರನ್ನಾಗಿಸುವುದಲ್ಲದೇ, ಶೈಕ್ಷಣಿಕ ಬೆಳವಣಿಗೆಗೂ ಪೂರಕವಾಗಿ ಪರಿಣಮಿಸುತ್ತದೆ ಎಂದು ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.
ಅವರು ಲಾವಣ್ಯ ರಿ. ಬೈಂದೂರು ಹಾಗೂ ಯಡ್ತರೆ ಗ್ರಾಪಂ ಸಹಯೋಗದೊಂದಿಗೆ ಆಯೋಜಿಸಲಾದ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ‘ಹೂವುಗಳು ಅರಳಲಿ’ ಹಾಗೂ ‘ನಾಣಿಭಟ್ಟನ ಸ್ವರ್ಗದ ಕನಸು’ ಮಕ್ಕಳ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಾವಣ್ಯದ ಅಧ್ಯಕ್ಷ ರಾಮ ಟೈಲರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಂಕರ ಪೂಜಾರಿ, ಬಹುಮಾನದ ಪ್ರಾಯೋಜಕ ಸದಾಶಿವ ಶಾನುಭೋಗ್, ಲಾವಣ್ಯದ ಹಿರಿಯ ಕಲಾವಿದರಾದ ಗಿರೀಶ್ ಬೈಂದೂರು, ಮಹೇಶ್ ನಾಯಕ್, ಲಾವಣ್ಯದ ಪ್ರಾಕ್ತನ ನಟಿ ಡಾ ಪ್ರತಿಭಾ ರೈ, ಲಾವಣ್ಯದ ವ್ಯವಸ್ಥಾಪಕರುಗಳಾದ ಗಣೇಶ ಕಾರಂತ್, ಶ್ರೀನಿವಾಸ ಪ್ರಭು ವೇದಿಕೆಯಲ್ಲಿದ್ದರು. ಲಾವಣ್ಯ ಕಾರ್ಯದರ್ಶಿ ಬಿ. ನರಸಿಂಹ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.