ಲೇಕ್  ಕಾನ್ಫರೆನ್ಸ್‌: ಸಂಗೀತಾ ಶೆಣೈಗೆ ಸಹ್ಯಾದ್ರಿ ಯಂಗ್ ಇಕಾಲಾಜಿಸ್ಟ್ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಎನರ್ಜಿಎಂಡ್ ವೆಟ್‌ಲ್ಯಾಂಡ್ ರಿಸರ್ಚ್ ಗ್ರೂಪ್, ಸೆಂಟರ್ ಫಾರ್ ಇಕೊಲಾಜಿಕಲ್ ಸಾಯನ್ಸಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಬೆಂಗಳೂರು, ಇವರು ಮೂಡಬಿದ್ರೆಯ ಆಳ್ವಾಸ್‌ನಲ್ಲಿ ಏರ್ಪಡಿಸಿದ್ದ ಲೇಕ್  ಕಾನ್ಫರೆನ್ಸ್‌ನಲ್ಲಿ ಕೋಟೇಶ್ವರದ ಬೀಜದುಂಡೆ ಕೃಷಿ ಪ್ರಯೋಗಕ್ಕೆ ಮನ್ನಣೆ ದೊರೆತಿದೆ.

Call us

Call us

Visit Now

ಕೋಟೇಶ್ವರದ ರಾಜಾರಾಮ ಪಾಲಿಮರ‍್ಸ್‌ನ ಮಾಲಕ ಕೆ. ಸುರೇಶ್ ಕಾಮತ್ ಅವರು ನಡೆಸಿದ ಬೀಜದುಂಡೆ (ಸೀಡ್ ಬಾಲ್) ಭತ್ತದ ಕೃಷಿ ಪ್ರಯೋಗವನ್ನೇ ಆಧಾರವಾಗಿಟ್ಟುಕೊಂಡು ಮಂಗಳೂರು ವಿ. ವಿಯ ಬಾಟನಿ ವಿಭಾಗದ ವಿದ್ಯಾರ್ಥಿನಿ ಕುಂಭಾಸಿಯ ಯು. ಸಂಗೀತಾ ಶೆಣೈ ಪ್ರಸ್ತುತ ಪಡಿಸಿದ ಪೋಸ್ಟರ್ ಪ್ರಸೆಂಟೇಶನ್ A Critical study on Seed ball Technic –An Innovative Agronomic Approa ch in Organic Farming in the Cultivation of OryzasativaL in kundapura Taluk of Udupi District ಎಂಬ ವಿವರಣೆಗೆ ತೀರ್ಪುಗಾರರು ತಲೆದೂಗಿದ್ದು, ಅವರಿಗೆ ಸಹ್ಯಾದ್ರಿ ಯಂಗ್ ಇಕಾಲಾಜಿಸ್ಟ್ (ದ್ವಿತೀಯ) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

Click here

Call us

Call us

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನವಂಬರ್ ೨೨ ರಿಂದ ೨೫ ರವರೆಗೆ ನಡೆಸಿದ ಈ ರಾಷ್ಟ್ರಮಟ್ಟದ ಲೇಕ್ ಕಾನ್ಫರೆನ್ಸ್ ನಲ್ಲಿ ರಾಜ್ಯದ ಹಾಗೂ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ವರದಿ ನೀಡಲು ಆಗಮಿಸಿದ್ದು, ಮಂಗಳೂರು ವಿಶ್ವವಿದ್ಯಾ ಲಯದಿಂದ ಪ್ರತಿನಿಧಿಸಿದ್ದ ಯು.ಸಂಗೀತಾ ಶೆಣೈಯವರ ಈ ಕಡಿಮೆ ವೆಚ್ಚದಿಂದ ಹೆಚ್ಚಿನ ಇಳುವರಿ ತೀರ್ಪುಗಾರರ ಅಭಿನಂದನೆಗೆ ಪಾತ್ರವಾಯಿತು.

ಕಾನ್ಫರೆನ್ಸ್ ಆನ್ ಕನ್ಸರ್‌ವೇಶನ್ ಎಂಡ್ ಸಸ್ಟೈನೆಬಲ್ ಮೇನೇಜ್‌ಮೆಂಟ್ ಆಫ್ ರಿವೈನ್ ಇಕೋಸಿಸ್ಟಮ್ ಎಂಬ ಹೆಸರಿನಲ್ಲಿ ನಡೆದ ಈ ಐಂಏಇ ಅಔಓಈಇಖಇಓಅಇ ನಲ್ಲಿದೇಶದ ವಿವಿಧ ಭಾಗಗಳಿಂದ ತೀರ್ಪುಗಾರರು ಆಗಮಿಸಿದ್ದು, ಬೀಜದುಂಡೆ ಕೃಷಿ ಪ್ರಯೋಗಕ್ಕೆ ಹೆಚ್ಚು ಪ್ರಚಾರ ನೀಡಬೇಕು. ಇದು ಯಶಸ್ವಿಯಾದರೆ ದೇಶಕ್ಕೆ ದೊಡ್ಡ ಲಾಭವಾಗುತ್ತದೆ ಈ ಬಗ್ಗೆ ರಾಷ್ಟ್ರೀಯ ಜರ್ನಲ್‌ಗಳಲ್ಲಿ ವರದಿ ಪ್ರಕಟಿಸಬೇಕು ಎಂದು ಅಭಿಪ್ರಾಯಪಟ್ಟರು.

ಲೇಕ್ ಕಾನ್ಪರೆನ್ಸ್-೨೦೧೮ರ ಚೆಯರ್‌ಮೆನ್ ಡಾ| ಟಿ. ವಿ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕರ್ಣಿಕ್, ಕಾನ್ಪರೆನ್ಸ್ ಕಾರ್ಯಾ ಧ್ಯಕ್ಷ ಡಾ| ಕುರಿಯನ್ ಅಭಿನಂದನೆ ಸಲ್ಲಿಸಿದರು.

ಇದೊಂದು ಉತ್ತಮ ಸಂಶೋಧನೆ ಯಾಗಿದ್ದು ಕೃಷಿ ಇಲಾಖೆ ಹಾಗೂ ಕೃಷಿ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳು ಈ ಪ್ರಯೋಗವನ್ನು ಗಂಭೀರವಾಗಿ ಪರಿಗಣಿಸಿ ನೀರು ಕಡಿಮೆ ಇರುವಲ್ಲಿ ಈ ಪದ್ಧತಿಯ ಕೃಷಿ ನಡೆಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯ ಪಟ್ಟರು.

 

Leave a Reply

Your email address will not be published. Required fields are marked *

seventeen − two =