ವಂಡ್ಸೆ: ಚಕ್ರಾ ನದಿಯಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಫೆ27: ತಾಲೂಕಿನ ವಂಡ್ಸೆ ಚಕ್ರಾ ನದಿಯಲ್ಲಿ ವಿವಾಹಿತ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ವಂಡ್ಸೆ ನಿವಾಸಿ ರವಿ ಪೂಜಾರಿ ಅವರ ಪತ್ನಿ ಸುಪ್ರಿತಾ ಪೂಜಾರಿ (25) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ಸುಪ್ರಿತಾ ಕೊನೆಗೂ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Click Here

Call us

Call us

Visit Now

ನೇರಳಕಟ್ಟೆ ಮೂಲದವರಾದ ಸುಪ್ರಿತಾ ಏಳು ವರ್ಷದ ಹಿಂದೆ ವಂಡ್ಸೆಯ ರವಿ ಪೂಜಾರಿ ಅವರನ್ನು ವಿವಾಹವಾಗಿದ್ದು, ದಂಪತಿಗಳಿಗೆ ಐದು ವರ್ಷದ ಒಬ್ಬ ಮಗನಿದ್ದ. ಸುಪ್ರಿತಾ ಮನೆಯ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ತೆರಳಿದ್ದರು. ಬೆಳಿಗ್ಗೆ ಎದ್ದಾಗ ನೆರಮನೆಯವರ ಸಹಾಯದಿಂದ ಬಾಗಿಲ ಚಿಲಕ ತೆಗೆಸಿ ಆಕೆಗಾಗಿ ಹುಡುಕಾಟ ನಡೆಸಿ ಪೊಲೀಸರಿಗೂ ದೂರು ನೀಡಿದ್ದರು. ಮಧ್ಯಾಹ್ನದ ವೇಳೆಗೆ ಸ್ಥಳೀಯರು ವಂಡ್ಸೆಯ ಚಕ್ರಾ ನದಿಯ ಬಳಿ ತೆಲುತ್ತಿರುವುದನ್ನು ಗಮನಿಸಿ ಆಕೆಯ ಶವ ಎಂಬುದನ್ನು ಗುರುತಿಸಿದ್ದಾರೆ. ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click Here

Call us

Call us

ವಿವಾಹೇತರ ಸಂಬಂಧ ಹೊಂದಿದ್ದ ಈಕೆ ಈ ಹಿಂದೆಯೂ ಮನೆ ಬಿಟ್ಟು ತೆರಳಿದ್ದರು. ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿದ ಬಳಿಕ ಮತ್ತೆ ಪತಿಯ ಮನೆಗೆ ಬಂದಿದ್ದ ಆಕೆ ದುಡುಕಿನ ನಿರ್ಧಾರ ಕೈಗೊಂಡಿಳೆ ಎನ್ನಲಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

2 × 1 =