ವಂಡ್ಸೆ: ಯಕ್ಷಿ ಯುವ ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಯಕ್ಷಿ ಅನ್ನಪೂರ್ಣೇಶ್ವರಿ ಯುವ ಸಂಘಟನೆ ವಂಡ್ಸೆ ಇದರ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ೨೦೧೭ರ ಶಿವರಾತ್ರಿ ಆಚರಣೆ, ಸಂಘಟನೆಯ ವಾರ್ಷಿಕೋತ್ಸವ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.

Call us

Call us

ಈ ಸಂದರ್ಭದಲ್ಲಿ ೨೦೧೬-೧೭ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಉಮೇಶ ಭಟ್ರಬೆಟ್ಟು, ಕಾರ್ಯದರ್ಶಿಯಾಗಿ ದಿನಕರ ಗಾಣಿಗ ಬಳಗೇರಿ, ಗೌರವಾಧ್ಯಕ್ಷರಾಗಿ ನಾಗರಾಜ ಆಚಾರ್ಯ, ಉಪಾಧ್ಯಕ್ಷರಾಗಿ ಸದಾನಂದ ಎಂ.ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ವಂಡ್ಸೆ, ಖಜಾಂಚಿಯಾಗಿ ಅಣ್ಣಪ್ಪ ಗಾಣಿಗ ಮಲ್ಲಾರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ ವಂಡ್ಸೆ, ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಹೊಲಾಡು, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಾಮಚಂದ್ರ ಆಚಾರ್ಯ ವಂಡ್ಸೆ, ಕ್ರೀಡಾ ಕಾರ್ಯದರ್ಶಿಯಾಗಿ ರಘುರಾಮ ಮಡಿವಾಳ, ಜೊತೆ ಕ್ರೀಡಾ ಕಾರ್ಯದರ್ಶಿ ಪ್ರವೀಣ ಶೆಟ್ಟಿ, ಸಲಹ ಸಮಿತಿ ಸದಸ್ಯರಾಗಿ ದಿನೇಶ ಕಾಂಚನ್ ಜಯರಾಜ್ ವಂಡ್ಸೆ, ಲೆಕ್ಕ ಪರಿಶೋಧಕರು ಶಂಕರ್ ಆಚಾರ್ಯ ಟೈಲರ್, ಗೌರವ ಸಲಹೆಗಾರರು ವಾಸು ಜಿ.ನಾಯ್ಕ್, ದಿನೇಶ ಬಿಲ್ಲಾ, ನಾಗರಾಜ ಮೊಗವೀರ, ಗಣೇಶ ನೆಂಪು, ಶಿವರಾಜ ಬಳಗೇರಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಮುಖ್ಯಸ್ಥರಾದ ಭಾಸ್ಕರ ಪಾತ್ರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

14 − 13 =