ವಂಡ್ಸೆ: ವಿಶ್ವ ಹಿಂದು ಪರಿಷತ್ – ಭಜರಂಗದಳ ಘಟಕ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ವಿಶ್ವ ಹಿಂದೂ ಪರಿಷತ್ – ಭಜರಂಗದಳ ಘಟಕ ಉದ್ಘಾಟನಾ ಸಮಾರಂಭ ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಜರುಗಿತು. ವಿಹಿಂಪ ಬೈಂದೂರು ಪ್ರಖಂಡದ ಅದ್ಯಕ್ಷ ಶ್ರೀದರ ಬಿಜೂರು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು.

Call us

Call us

ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೂಕ್ತೇಸರರಾದ ವಿ.ಕೆ.ಶಿವರಾಮ ಶೆಟ್ಟಿ ಸಭೆಯ ಅದ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಗೌರವಾದ್ಯಕ್ಷ ಕೊಳ್ತ ಗೋಪಾಲ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತನ ಅದ್ಯಕ್ಷ ಎಲ್. ಎನ್. ಆಚಾರಿ, ಭಜರಂಗದಳ ಸಂಚಾಲಕ ಶರತ ಬಿಲ್ಲಾ, ಯಕ್ಷೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪಾತ್ರಿ ಭಾಸ್ಕರ, ಸಂಸ್ಥೆಯ ಸಂಚಾಲಕರಾದ ಮಹೇಶ ಗಾಣಿಗ, ಮಂಜುನಾಥ ಶಾರ್ಕೆ, ಪ್ರಕಾಶ ಪೂಜಾರಿ ಜೆಡ್ಡು, ಸಂದೀಪ ಚಂದನ, ರಿತೇಶ ಕುಮಾರ ಶೆಟ್ಟಿ, ಸಂಪತ್, ಸುಧಾಕರ ಪೂಜಾರಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷತ್ತಿನ ವಂಡ್ಸೆ ಘಟಕದ ಅದ್ಯಕ್ಷ ಎಲ್.ಎನ್. ಆಚಾರಿ ಸ್ವಾಗತಿಸಿದರು. ಜೀವನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Leave a Reply

Your email address will not be published. Required fields are marked *

five + 17 =