ವಂಡ್ಸೆ: ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ಯುವ ಸಂಘಟನೆ ವಾರ್ಷಿಕೋತ್ಸವ

Call us

Call us

ಕುಂದಾಪುರ: ಸಂಘಟನೆಗಳು ಸಮಾಜಮುಖಿಯಾಗಿ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಸಮಾಜ ಅಂಥಹ ಸಂಘಟನೆಗಳನ್ನು ಗುರುತಿಸುತ್ತದೆ. ಧಾರ್ಮಿಕ ಸ್ಥಳಗಳು ಸೌಹಾರ್ದತೆಯನ್ನು ಉಂಟು ಮಾಡುವ ಕೆಲಸ ಮಾಡಬೇಕು. ದೈವಸ್ಥಾನಗಳ ಬೆಳವಣಿಗೆಯ ಜೊತೆಯ ಸ್ಥಳೀಯವಾಗಿ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯೂ ಆಗಬೇಕು ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

Click here

Click Here

Call us

Call us

Visit Now

Call us

Call us

ವಂಡ್ಸೆಯ ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಮತ್ತು ಶ್ರೀ ಯಕ್ಷೀ ಯುವ ಸಂಘಟನೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ-ಆತ್ರಾಡಿ-ಬಗ್ವಾಡಿ ಭಾಗದ ಬಹುದಿನ ಸಂಪರ್ಕ ರಸ್ತೆಯ ಕನಸು ಈಡೇರಿದೆ. ಶೀಘ್ರವಾಗಿ ಈ ರಸ್ತೆಯಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗುವುದು. ವಂಡ್ಸೆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಶ್ರೀ ಯಕ್ಷೀಅನ್ನಪೂರ್ಣೇಶ್ವರಿ ಯುವ ಸಂಘಟನೆಯ ಅಧ್ಯಕ್ಷ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ.ಶಿವಾನಂದ ಆಚಾರ್ಯ ಬಸ್ರೂರು ಆಶೀರ್ವಚನ ನೀಡಿದರು. ತಾ.ಪಂ.ಸದಸ್ಯ ಉದಯ ಪೂಜಾರಿ ಚಿತ್ತೂರು, ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಕೆರಾಡಿ ವರಸಿದ್ಧಿ ವಿನಾಯಕ ಪ.ಪೂ.ಕಾಲೇಜು ಸಂಸ್ಥಾಪಕರಾದ ಚಂದ್ರಶೇಖರ ಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಸ.ಮಾ.ಹಿ.ಪ್ರಾ.ಶಾಲೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಗಾಣಿಗ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ರವಿ ಗಾಣಿಗ ಮಲ್ಲಾರಿ, ಉದ್ಯಮಿ ಮಹಾಬಲ ನಾಯ್ಕ್, ಗಣೇಶ ಶೆಟ್ಟಿ ನಡಾಡಿ, ಗ್ರಾ.ಪಂ.ಮಾಜಿ ಸದಸ್ಯ ಅಣ್ಣು ಪೂಜಾರಿ, ಸಂತೋಷ ಪೂಜಾರಿ ಬಳಗೇರಿ, ಯುವ ಸಂಘಟನೆ ಗೌರವಾಧ್ಯಕ್ಷ ಶಿವರಾಜ ಬಳಗೇರಿ, ಕಾರ್ಯದರ್ಶಿ ಸತೀಶ ಪೂಜಾರಿ, ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ದ ಭಾಗವತ, ಈಗಾಗಲೇ ಯಶಸ್ವಿ ೨೫ ತಿರುಗಾಟ ಪೂರೈಸಿದ ಉಮೇಶ ಸುವರ್ಣ ಗೋಪಾಡಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಸಂಜೀವ ವಂಡ್ಸೆ ಇವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಮುಖ್ಯಸ್ಥರಾದ ಭಾಸ್ಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಬಿ.ಟಿ.ಹೊಲಾಡು ವರದಿ ಮಂಡಿಸಿದರು. ವಾಸು ಜಿ.ನಾಯ್ಕ್ ಸನ್ಮಾನ ಪತ್ರ ವಾಚಿಸಿದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪದ್ಮಾವತಿ ಅವರಿಗೆ ಉದ್ಯಮಿ ಕೃಷ್ಣಮೂರ್ತಿ ಮಂಜರು ನೀಡಿದ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಸಂಘಟನೆಯ ನಿಕಟಪೂರ್ವ ಕಾರ್ಯದರ್ಶಿ ವಾಸು ಜಿ.ನಾಯ್ಕ್ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಂತರ ಶ್ರೀನಿವಾಸ ಕಮ್ಯೂನಿಕೇಷನ್ ಪ್ರಾಯೋಜಕತ್ವದಲ್ಲಿ ಮಿರಕಲ್ ಡಾನ್ಸ್ ಅಕಾಡೆಮಯಿಂದ ನೃತ್ಯ, ಮೂರುಮುತ್ತು ಕಲಾವಿದರಿಂದ ಮಿ.ಪಾಪ ಪಾಂಡು ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

11 + thirteen =