ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರ ಬೃಹತ್ ರಂಗೋಲಿಯನ್ನು ಸ್ವಯಂಸ್ಪೂರ್ತಿಯಿಂದ ಬಿಡಿಸಿದ ಕಲಾವಿದನ ಕೈಚಳಕಕ್ಕೆ ಸ್ವತಃ ಮಂತ್ರಾಲಯದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಘವೇಂದ್ರ ಸ್ವಾಮಿಯ ಪರಮಭಕ್ತರಾಗಿರುವ ತಾಲೂಕಿನ ವಕ್ವಾಡಿಯ ಕಲಾವಿದ ಮಹೇಂದ್ರ ಆಚಾರ್ಯ ಪ್ರತಿವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ತೆರಳಿದ್ದರು. ಆ.24ರಂದು ಸ್ವ ಇಚ್ಚೆಯಿಂದ ಕ್ಷೇತ್ರದಲ್ಲಿ ಬೃಹತ್ ರಂಗೋಲಿ ರಚನೆಗೆ ಮುಂದಾದರು. ಸತತ 8 ತಾಸುಗಳ ಪರಿಶ್ರಮದಿಂದ 7.5 ಅಡಿ ಎತ್ತರ ಹಾಗೂ 4 ಅಡಿ ಅಗಲದ ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿ 1008 ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ ಪಾದರ ರಂಗೋಲಿ ರಚಿಸಿ ಭಕ್ತವೃಂದವನ್ನು ನಿಬ್ಬೆರುಗೊಳಿಸಿದ್ದಾರೆ. ರಂಗೋಲಿಯಲ್ಲಿ ಮೂಡಿದ ತನ್ನ ಭಾವ ಚಿತ್ರ ಕಂಡ ಶ್ರೀಗಳು ಬೆರಗಾಗಿ ಕಲಾವಿದ ಮಹೇಂದ್ರ ಆಚಾರ್ಯ ಅವರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದ್ದಾರೆ.
ವಕ್ವಾಡಿ ನಿವಾಸಿಯಾಗಿರುವ ಮಹೇಂದ್ರ ಆಚಾರ್ಯ ಗ್ರಾಮೀಣ ಕಲಾಪ್ರತಿಭೆ. ಮಂಗಳೂರಿನ ಮಹಾಲಸಾ ಆರ್ಟ್ ಕಾಲೇಜಿನಲ್ಲಿ ಬಿಬಿಎ (ಬಾಚುಲರ್ ಆಫ್ ವಿಷುವಲ್ ಆರ್ಟ್) ಪದವಿ ಪಡೆದವರು. ಪದವಿ ಬಳಿಕ ಊರಿನಲ್ಲಿ ಕಲಾಶಾಲೆ ಆರಂಭಿಸಿ ಗ್ರಾಮೀಣ ಯುವ ಪ್ರತಿಭೆಗಳಿಗೆ ಕಲೆಯನ್ನು ಧಾರೆಯೆರೆಯುತ್ತಿದ್ದಾರೆ.

