ವಕ್ವಾಡಿ ಗುರುಕುಲದಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಜರುಗಿತು.

Call us

Call us

Call us

ಉಪನ್ಯಾಸರ ಶ್ರೀನಾಥ್ ರಾವ್ ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಳಕೆಂಬ ಜ್ಞಾನದಿಂದ ಕತ್ತಲೆಂಬ ಅಜ್ಞಾನವನ್ನು ತೊಲಗಿಸಿ ಮುಂದುವರಿಯಬೇಕು. ಈ ವಿದ್ಯಾರ್ಥಿಯ ಜೀವನ ಒತ್ತಡದಿಂದ ಕೂಡಿಲ್ಲ. ಈ ಸಮಯವೇ ಜ್ಞಾನವನ್ನು ಪಡೆಯಲಿಕ್ಕೆ ಸೂಕ್ತವಾಗಿದೆ. ಗುರುಕುಲದಲ್ಲಿ 166 ವಿಜ್ಞಾನ ಮಾದರಿ ಅಚ್ಚುಕಟ್ಟಾಗಿದ್ದು, ಮಕ್ಕಳು ವಿವರಿಸಿದ ರೀತಿ ತುಂಬಾ ಚೆನ್ನಾಗಿತ್ತು. ನನಗೆ ತುಂಬಾ ಸಂತೋಷವಾಯಿತು ಎಂದು ತಿಳಿಸಿದರು.

Call us

Call us

ಜ್ಞಾನ, ಕೌಶಲ್ಯ ಎರಡರಿಂದ ಹೊಸತನ ಬರುತ್ತದೆ. ಈ ಹೊಸತನದ ಸಂಕೇತವೇ ಪ್ರಗತಿ. ಅಲ್ಲದೇ ಗುಣಮಟ್ಟದ ಶಿಕ್ಷಣ ದೇಶವನ್ನು ಬದಲಾಯಿಸಬಲ್ಲದು ಇಂತಹ ಸಂದರ್ಭದಲ್ಲಿ ಈ ಮಕ್ಕಳಿಗೆ ಸಂಶೋಧನೆಯ ವೇದಿಕೆ ಅತ್ಯವಶ್ಯಕ. ಇದರಿಂದ ಮಕ್ಕಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬರಲು ಸಾಧ್ಯ. ಇಂತಹ ಕೆಲಸವನ್ನು ಗುರುಕುಲ ಪಬ್ಲಿಕ್ ಶಾಲೆ ನಿರ್ವಹಿಸಿದೆ. ಹಾಗೆಯೇ ಗುರುವಿಲ್ಲದೇ ಯಾವ ಕೆಲಸವು ಸಾಧ್ಯವಿಲ್ಲ ಈ ಗುರುಕುಲದಲ್ಲಿ ಗುರುವಿನ ಸಹಾಯದಿಂದ ವಿಜ್ಞಾನದ ಪ್ರದರ್ಶನವಾಗುತ್ತಿದೆ. ಎಂಬುವುದು ತುಂಬಾ ಸಂತೋಷವಾಗಿದೆ ಎಂದು ನುಡಿದರು.

ಗುರುಕುಲ ಪಬ್ಲಿಕ್ ಶಾಲಾ ಪ್ರಾಂಶುಪಾಲರಾದ ಸಾಯಿಜು. ಕೆ. ಆರ್ ನಾಯರ್ ಮಾತನಾಡಿ ವಿದ್ಯಾರ್ಥಿಗಳ ಶ್ರಮಕ್ಕೆ ತುಂಬಾ ಸಂತೋಷವಾಗುತ್ತಿದೆ, ಎಂದು ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಜಂಟಿ ಕಾರ್ಯನಿರ್ವಹಕರಾದ ಸುಭಾಶ್ಚಂದ್ರ ಶೆಟ್ಟಿ.ಕೆ ರವರು ಮಾತನಾಡಿ, ಮಕ್ಕಳ ಶ್ರಮ ಶ್ಲಾಘನೀಯವಾದದ್ದು. ಇದರಿಂದ ನಾವು ಮಕ್ಕಳ ಜೊತೆಗೆ ಪ್ರೇರಿಪಿತರಾಗಿದ್ದೇವೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗುವುದು ಎಂದು ನುಡಿದರು. ನಂತರ ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮತ್ತೋರ್ವ ಜಂಟಿ ಕಾರ್ಯನಿರ್ವಹಕರಾದ ಅನುಪಮ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ನಾಗರತ್ನರವರು ಸ್ವಾಗತಿಸಿದರು. ಬಬಿತಾರವರು ವಂದಿಸಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ರಸಾಯನ ಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ಈ ಮೂರು ರೀತಿಯ ವಿಜ್ಞಾನ ಮಾದರಿಗಳ ಅತ್ಯುತ್ತಮ ಗುಂಪುಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿ, ಶಾಲಾ ಪ್ರಾಂಶುಪಾಲರು ಶುಭಾಶಯವನ್ನು ಕೋರಿದರು. ಈ ಕಾರ್ಯಕ್ರಮ ವಿಕ್ಷೀಸಲು ಶಾಲೆಯ ಪಾಲಕರಲ್ಲದೇ, ಸುತ್ತ-ಮುತ್ತಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಿ ವಿಜ್ಞಾನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವಲ್ಲದೇ ವಿದ್ಯಾರ್ಥಿಗಳು ಸ್ವತ: ತಯಾರಿಸಿದ ಕರಕುಶಲ ಪ್ರದರ್ಶನ ಮತ್ತು ಸಂಗ್ರಹಿಸಿದ ಅತೀ ವಿಶಿಷ್ಠ ಮತ್ತು ವಿರಳವಾದ ನಾಣ್ಯ ಮತ್ತು ನೋಟುಗಳ ಪ್ರದರ್ಶನ ಎಲ್ಲರ ಗಮನವನ್ನು ಸೆಳೆಯಿತು.

Leave a Reply

Your email address will not be published. Required fields are marked *

13 + one =