ವಕ್ವಾಡಿ ಗುರುಕುಲದಲ್ಲಿ ಸ್ವಾತಂತ್ರ್ಯ ದಿನಾಚರಣೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ೭೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟಿ ಕಾರ‍್ಯನಿರ್ವಹಕರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ವೀರರನ್ನು ಸ್ಮರಿಸಿ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸದುಪಯೋಗ ಮಾಡಿಕೊಂಡು ಭಾರತವನ್ನು ಮುನ್ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Click Here

Call us

Call us

Visit Now

ಧ್ವಜಾರೋಹಣ ಸಂದರ್ಭದಲ್ಲಿ ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟೀ ಕಾರ‍್ಯನಿರ್ವಹಕಿ ಅನುಪಮ ಎಸ್.ಶೆಟ್ಟಿ, ಶಾಲೆಯ ಪ್ರಾಂಶುಪಾಲ ಸಾಯಿಜು ನಾಯರ್, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೆನ್ನಬಸಪ್ಪ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Click here

Click Here

Call us

Call us

ಧ್ವಜರೋಹಣ ಕಾರ‍್ಯಕ್ರಮದ ನಂತರ ಗುರುಕುಲ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕರಾಟೆ ಪ್ರದರ್ಶನ ಹಾಗೂ ಸ್ಕೇಟಿಂಗ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ನಾಲ್ಕು ಪಂಗಡಗಳಲ್ಲಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡುಗಳ ಸ್ಪರ್ಧೆಯನ್ನು ಮಾಡಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಂಗ್ಲೀಷ್ ಅಧ್ಯಾಪಕ ರಾಮಚಂದ್ರ ಹೆಬ್ಬಾರ್ ರವರು ಕಾರ‍್ಯಕ್ರಮ ಸಂಘಟನೆಯನ್ನು ಮಾಡಿದರು. ಕುಮಾರಿ ಶ್ರೀರಕ್ಷಾ ಪೈ ಹಾಗೂ ಕುಮಾರಿ ಮಹಿಮಾ ಉಪಾಧ್ಯಾಯ ಸ್ವಾತಂತ್ರ್ಯೋತ್ಸವದ ಭಾಷಣವನ್ನು ಮಾಡಿದರು. ಕುಮಾರಿ ಪ್ರೀತಿ ಆರ್.ತೋಳಾರ್ ಹಾಗೂ ಕುಮಾರಿ ಇಂಚರ ಕಾರಂತ್ ಕಾರ‍್ಯಕ್ರಮ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *

nineteen − three =