ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಾಗ್ರಹಣ ಸಮಾರಂಭ ಜರುಗಿತು.

ಪದಾಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ಇದರ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ನಾಯಕತ್ವ ಗುಣ ಅತೀ ಅವಶ್ಯಕ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ವಿಶಿಷ್ಠವಾಗಿ ಬದುಕಲು ಉತ್ತಮ ನಾಯಕತ್ವ ಅನಿವಾರ್ಯ. ಶಾಲೆಯಲ್ಲಿ ಕಲಿಯುವ ಎಲ್ಲಾ ವಿಷಯಗಳು ಹಾಗೂ ಮೌಲ್ಯಗಳು ಮುಂದಿನ ಅವರ ಜೀವನಕ್ಕೆ ತರಬೇತಿಯಾಗಲಿದೆ. ಅಲ್ಲದೇ, ಸಮಗ್ರ ಭಾರತ ದೇಶವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ನಾಯಕತ್ವ ಗುಣಗಳ ಪಾತ್ರ ಗುರುತರವಾಗಿದೆ ಎಂದು ಅಲ್ಲದೇ, ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಉತ್ತಮ ನಾಯಕ ಎಂದರೆ ಯಾರು? ಹಾಗೂ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಬೇಕಾಗುವ ವಿಶಿಷ್ಠ ಗುಣಗಳನ್ನು ತಿಳಿಸಿದರು.

ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಶಸ್ತಿ ಪತ್ರಗಳನ್ನು ಹಾಗೂ ಸಾಂಕೇತಿಕವಾಗಿ ಬ್ಯಾಚಸ್‌ಗಳನ್ನು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಞತೆಯನ್ನು ವಹಿಸಿದ ಬಾಂಡ್ಯಾ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯನಿರ್ವಹಕರಾದ ಶ್ರೀ. ಸುಭಾಶ್ಚಂದ್ರ ಶೆಟ್ಟಿ ರವರು ಮಾತನಾಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಅರವಿಂದ ವಿ ಮರಳಿರವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಷ್ಟೆಯಲ್ಲದೇ, ಇಂತಹ ಮೌಲ್ಯಯುತ ಗುಣವನ್ನು ಮುಂದಿನ ಭವಿಷ್ಯತ್ತಿಗಾಗಿ ಬೇಳೆಸಿಕೊಳ್ಳಬೇಕು ಎಂದರು.

ಈ ಶಾಲೆಯ 2018-19 ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳಾಗಿ ಚಂದನ್ ನಾಯಕ್ ಹಾಗೂ ಸುಹಾಸ್ ಶೆಟ್ಟಿ ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದರೆ ಉಳಿದ 24 ಪ್ರತಿನಿಧಿಗಳು ತಮ್ಮ ಪ್ರತಿಭೆ, ಅಸಾಧಾರಣ ವ್ಯಕ್ತಿತ್ವ ಹಾಗೂ ಶಿಸ್ತಿನ ಗುಣದ ಮಾನದಂಡದೊಂದಿಗೆ ಆಯ್ಕೆಯಾಗಿ ಪದಗ್ರಹಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಜಂಟಿ ಕಾರ್ಯನಿರ್ವಾಹಕರುಗಳಾದ, ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ.ಎಸ್.ಶೆಟ್ಟಿರವರು ಉಪಸ್ಥಿತರಿದ್ದರು.

ಕುಮಾರಿ.ನಿಧಿ ಮತ್ತು ಕುಮಾರಿ. ಪ್ರಣಿಗಾ ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

9 + eleven =