ವಾರಾಹಿ ಕಾಲುವೆ: ಮತ್ತೆ ಒಡೆದು ಕೃಷಿ ತೋಟಕ್ಕೆ ನುಗ್ಗಿದ ನೀರು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಾರದ ಹಿಂದೆ ಒಡೆದು ಹೋಗಿದ್ದ ವಾರಾಹಿ ಕಾಲುವೆಯ ದುರಸ್ತಿ ಸಂದರ್ಭ ಅನಿರೀಕ್ಷಿತವಾಗಿ ಕಾಲುವೆಯಲ್ಲಿ ನೀರು ಹರಿದುಬಂದ ಕಾರಣ ಮತ್ತೂಮ್ಮೆ ಕೃಷಿ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ.

Call us

ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊಯ್ಕಡಿ ಕೆಳಹೆಬ್ಟಾಗಿಲು ಬಳಿ ಡಿ. 17ರಂದು ವಾರಾಹಿ ಎಡದಂಡೆಯ ಕಾಲುವೆಯ ತಳಭಾಗ ಒಡೆದು ನೀರು ಪರಿಸರದ ಕೃಷಿ ಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿತ್ತು. ವಾರಾಹಿ ಎಡದಂಡೆಯ 26ನೇ ಕಿ.ಮೀ.ಯಲ್ಲಿ ಒಡೆದ ಕಾಲುವೆಯ ದುರಸ್ತಿ ಕಾಮಗಾರಿ ಹಾಗೂ 23ನೇ ಕಿ.ಮೀ. ಕಾಲುವೆಯ ಬಾಕಿ ಉಳಿದ ಕಾಮಗಾರಿಗಾಗಿ ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಕಾಲುವೆ ಯಲ್ಲಿ ನೀರು ನಿಲುಗಡೆಗೊಳಿಸಲು 22ನೇ ಕಿ.ಮೀ.ಯಲ್ಲಿ ಬಂಡನ್ನು (ತಾತ್ಕಾಲಿಕ ತಡೆಗೋಡೆ) ಹಾಕಲಾಗಿತ್ತು. ಆದರೆ ಗುರುವಾರ ರಾತ್ರಿ ಬಂಡು ಒಡೆದು ಕಾಲುವೆಯಲ್ಲಿ ನೀರು ನುಗ್ಗಿತು.ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವಾರಾಹಿ ಎಂಜಿನಿಯರುಗಳಿಗೆ ಕರೆ ಮಾಡಿ ನೀರು ನಿಲ್ಲಿಸುವಂತೆ ತಿಳಿಸಿದ ಅನಂತರ ಕಾಲುವೆಯಲ್ಲಿ ಹರಿಸುವುದನ್ನು ನಿಲ್ಲಿಸಲಾಗಿತ್ತು.

ಜಮೀನಿನಲ್ಲಿ ರಾಶಿ ರಾಶಿ ಮಣ್ಣು ಮಾ. 17ರಂದು ವಾರಾಹಿ ಕಾಲುವೆಯಿಂದ ನೀರು ನುಗ್ಗಿದ ಪರಿಣಾಮ ಕೃಷಿ ಜಮೀನುಗಳಲ್ಲಿ ಮಣ್ಣು ತುಂಬಿ ಕೃಷಿಗೆ ಹಾನಿ ಸಂಭವಿಸಿತ್ತು.

ಈ ಬಗ್ಗೆ ಇಲಾಖೆ ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಕೃಷಿಕರು ದೂರಿದ್ದಾರೆ. ಮಣ್ಣು ಶೇಖರಣೆಯಿಂದಾಗಿ ಅಡಿಕೆ ಸಸಿಗಳು ಒಣಗಲಾರಂಭಿಸಿವೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ “ಅಷ್ಟೇನೂ ಹಾನಿಯಾಗಿಲ್ಲ’ ಎಂದಿದ್ದಾರೆ. ಮಳೆ ನೀರು ಹೋಗುವ ನೈಸರ್ಗಿಕ ತೋಡನ್ನು ಎತ್ತರಕ್ಕೆ ಏರಿಸಿದ್ದಲ್ಲಿ ನೀರು ಕೃಷಿಭೂಮಿಗೆ ನುಗ್ಗುವುದನ್ನು ತಡೆಯಬಹುದಿತ್ತು ಎನ್ನುವುದು ಕೃಷಿಕರ ಅಭಿಪ್ರಾಯ.

ಕಾಮಗಾರಿಗಾಗಿ ನೀರನ್ನು ನಿಲ್ಲಿಸಿ ಹಾಕಲಾದ ಬಂಡನ್ನು (ತಡೆಗೋಡೆ) ಕಿಡಿಗೇಡಿಗಳು ರಾತೋರಾತ್ರಿ ಸಂಪೂರ್ಣ ಹಾನಿ ಮಾಡಿ ನಾಲೆಗೆನೀರು ಹರಿಸಿ ಕಾಮಗಾರಿ ನಡೆಸಲು ಅಡ್ಡಿಪಡಿಸಿರುತ್ತಾರೆ ಹಾಗೂ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕಾಮಗಾರಿ ನಡೆಸುವ ಗುತ್ತಿಗೆದಾರರು ಕೋಟ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

twelve − six =