ವಾಲಿಬಾಲ್ ಪಂದ್ಯಾಟ: ಗಂಗೊಳ್ಳಿ ನ್ಯೂ ಫ್ರೆಂಡ್ಸ್ ತಂಡಕ್ಕೆ ಕರಾವಳಿ ವಾರಿಯರ್ಸ್ ಟ್ರೋಫಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕರಾವಳಿ ವಾರಿಯರ್ಸ್ ಬೇಲಿಕೇರಿ ಬಂದರ್ ಗಂಗೊಳ್ಳಿ ಇದರ 7ನೇ ವಾರ್ಷಿಕೋತ್ಸವದ ಅಂಗವಾಗಿ ಬಡ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಗಂಗೊಳ್ಳಿಯ ಕೆಎಫ್‌ಡಿಸಿ ವಠಾರದಲ್ಲಿ ಜರಗಿದ ಬೈಂದೂರು ವಲಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ನ್ಯೂ ಫ್ರೆಂಡ್ಸ್ ಗಂಗೊಳ್ಳಿ ತಂಡ ಪ್ರಥಮ ಸ್ಥಾನಿಯಾಗಿ ಕರಾವಳಿ ವಾರಿಯರ್ಸ್ ಟ್ರೋಫಿ-2021ಮತ್ತು 15 ಸಾವಿರ ರೂ. ನಗದನ್ನು ತನ್ನದಾಗಿಸಿಕೊಂಡಿತು.

ಬೆಳಗಿನ ಜಾವ ನಡೆದ ಅಂತಿಮ ಹಣಾಹಣಿಯಲ್ಲಿ ನ್ಯೂ ಫ್ರೆಂಡ್ಸ್ ಗಂಗೊಳ್ಳಿ ತಂಡ ಕೋಸ್ಟಲ್ ಸ್ಟ್ರೈಕರ್ ಗಂಗೊಳ್ಳಿ ತಂಡವನ್ನು ಸೋಲಿಸಿತು. ಬಿ.ಕೆ.ಬಾಯ್ಸ್ ಗಂಗೊಳ್ಳಿ ತಂಡ ತೃತೀಯ ಸ್ಥಾನಿಯಾಯಿತು. ವಿಜೇತ ತಂಡಗಳಿಗೆ ಸಮಾರೋಪ ಸಮಾರಂಭದ ಅತಿಥಿಗಳಾಗಿದ್ದ ಗಂಗೊಳ್ಳಿಯ ಮತ್ಸ್ಯೋದ್ಯಮಿ ಹರೀಶ ಕುಮಾರ್, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಗುರುರಾಜ್ ಖಾರ್ವಿ ಮತ್ತು ಗಣೇಶ ಪೂಜಾರಿ ಬೇಲಿಕೇರಿ ಬಹುಮಾನ ವಿತರಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಸುಮಂತ ಖಾರ್ವಿ ಉಪಸ್ಥಿತರಿದ್ದರು. ಇದೇ ಸಂದರ್ಭ ಐದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ವಿತರಿಸಲಾಯಿತು.

ಉದ್ಘಾಟನೆ: ಕುಂದಾಪುರ ಎಪಿಎಂಸಿ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿದರು. ಗಂಗೊಳ್ಳಿ ಶ್ರೀಮಾತಾ ಮರೈನ್ ಪ್ರೈ.ಲಿ.ನ ಜಿಎಂ ರಾಜು ತೋಳಾರ್ ಅಧ್ಯಕ್ಷತೆ ವಹಿಸಿದ್ದರು. ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಉಪಾಧ್ಯಕ್ಷ ಸೂರಜ್ ಖಾರ್ವಿ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಮತ್ಸ್ಯೋದ್ಯಮಿ ಹರೀಶ ಕುಮಾರ್, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಡಿ.ಖಾರ್ವಿ, ಜ್ಞಾನದಾಸ ಕಾನೋಜಿ, ಮಂಜುಳಾ ದೇವಾಡಿಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

14 + 3 =