ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಬ್ಯಾರೀಸ್ ಪಿಯು ಕಾಲೇಜು ಕೋಡಿ ಕುಂದಾಪುರ ದ್ವಿತೀಯ ಸ್ಥಾನ ಪಡೆದು ಮಹಮ್ಮದ್ ಹಯಾಜ್ ಹಿಮಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರನ್ನು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರೀತೇಶ್ ಶೆಟ್ಟಿ ಗುಲ್ವಾಡಿ, ಇಲಿಯಾಸ್ ಹಾಗೂ ಜಫ್ ಸನ್ನಿ ಡಿಸೋಜಾ ಇವರು ತರಬೇತಿ ಗೊಳಿಸಿರುತ್ತಾರೆ.
ವಾಲಿಬಾಲ್ ಪಂದ್ಯಾಟ: ಮಹಮ್ಮದ್ ಹಯಾಜ್ ರಾಷ್ಟ್ರಮಟ್ಟಕ್ಕೆ ಆಯ್ಕೆ
