ವಿಚ್ಛೇದನಕ್ಕೆ ಮುನ್ನ ಹೀಗೊಮ್ಮೆ ಯೋಚಿಸಿ, ನಿಮ್ಮ ಮಗು ಅನಾಥವಾಗದಿರಲಿ

Call us

Call us

ಹಿಂದೆಲ್ಲಾ ವಿಚ್ಛೇದನ ಅಪರೂಪದ, ಅತ್ಯಂತ ಚರ್ಚೆಯ ವಿಷಯವಾಗಿರುತ್ತಿತ್ತು. ಆದರೆ ಇತ್ತೀಚಿಗೆ ಅದು ಮದುವೆಯಷ್ಟೇ ಕಾಮನ್ ಆಗಿದೆ. ತಾನು ತನ್ನದೆಂಬ ಅಹಂಕಾರದಲ್ಲಿ ಬೇರೆಯವರ ಭಾವನೆ ಅರ್ಥ ಮಾಡಿಕೊಳ್ಳುವುದರಲ್ಲಿ, ಮನುಷ್ಯ ಸಂಬಂಧವನ್ನು ಉಳಿಸಿಕೊಳ್ಳುದರಲ್ಲಿ ನಾವು ವಿಫಲರಾಗುತ್ತದ್ದೇವೆ.

Call us

Call us

ಹಿಂದಿನ ಕಾಲದಲ್ಲಿ ಪರಸ್ಪರ ಹೊಂದಾಣಿಕೆ ಕಷ್ಟವೆಂಬುದು ಅರಿವಿಗೆ ಬಂದ ಮೇಲೂ ಕೆಲವು ವರ್ಷ ಜೊತೆಗಿದ್ದು, ಗಂಭೀರ ಕಾರಣಕ್ಕೆ ಇನ್ನು ಹೊಂದಾಣಿಕೆ ಸಾಧ್ಯವೇ ಇಲ್ಲ ಎಂಬುದು ಖಚಿತವಾದ ಮೇಲೆ ಜೋಡಿಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನೆ ಪಡೆಯುತ್ತಿದ್ದರು. ಆದರೆ ಈಗ ಮದುವೆಯಾಗಿ ಕೆಲವೇ ದಿನಕ್ಕೆ ವಿಚ್ಚೇದನೆ ಬಯಸುವವರ ಸಂಖ್ಯೆ ಸಾಕಷ್ಟಿದೆ. ಮಕ್ಕಳಾದ ಮೇಲೆ ವಿಚ್ಛೇದನೆ ಬಯಸುವ ದಂಪತಿಗಳು ಇಂಥ ಗಂಭೀರ ನಿರ್ಧಾರ ತೆಗೆದುಕೊಳ್ಳೋ ಮುನ್ನ ಸಾಕಷ್ಟು ಆಯಾಮದಲ್ಲಿ ಯೋಚಿಸೋದು ಅಗತ್ಯ ತಂದೆ ತಾಯಿಯರಲ್ಲಿರುತ್ತದೆ.
ಇಲ್ಲಿ ವಿಚ್ಛೇದನೆ ಪರಿಣಾಮ ಬೀರೋದು ಕೇವಲ ಇಬ್ಬರ ಬದುಕಿನ ಮೇಲಲ್ಲ. ಬದಲಿಗೆ ಇನ್ನೂ ಬಾಳಿ ಬದುಕಬೇಕಾದ ಇನ್ನೊಂದು ಜೀವ ಅಥವಾ ಜೀವಗಳ ಜೀವನದ ಮೇಲು ಕೂಡ. ಹಾಗಾಗಿ ವಿಚ್ಛೇದನೆ ತೀರ್ಮಾನಕ್ಕೆ ಬರೋ ಮುನ್ನ ಒಮ್ಮೆ ಹೀಗೂ ಯೋಚಿಸಿ.

ಮಗುವಿನ ಭವಿಷ್ಯದ ಮೇಲಾಗುವ ಪರಿಣಾಮ:
ಮಗುವಿನ ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಅಮ್ಮ ಮತ್ತು ಅಪ್ಪ ಇಬ್ಬರ ಸಾಂಗತ್ಯ, ಪ್ರೀತಿ ಹಾಗೂ ಕಾಳಜಿ ಅಗತ್ಯ. ಅಹಂ, ಸಿಟ್ಟು, ಅಹಂಕಾರ, ದ್ವೇಷದ ಕಾರಣಕ್ಕೆ ಪತಿ ಹಾಗೂ ಪತ್ನಿ ಸುಲಭವಾಗಿ ದೂರವಾಗುವ ನಿರ್ಧಾರ ಕೈಗೊಳ್ಳಬಹುದು. ಆದ್ರೆ ಅವರ ಆ ನಿರ್ಧಾರ ಮಗುವಿನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ಗ್ಯಾರಂಟಿ.

Click here

Click Here

Call us

Call us

Visit Now

ಮಗುವಿನ ಮಾನಸಿಕ ಸ್ಥಿತಿ ಏನಾಗಬಹುದು?
ಇಬ್ಬರ ಈ ನಿರ್ಧಾರದಿಂದ ಆ ಪುಟ್ಟ ಹೃದಯಕ್ಕೆ ಅದೆಷ್ಟು ಘಾಸಿಯಾಗಬಹುದು. ನಿಮ್ಮ ನಿರ್ಧಾರ ಮಗುವಿನ ಮನಸ್ಸಿನ ಮೇಲೆ ವಾಸಿಯಾಗದಂತಹ ಆಘಾತವನ್ನುಂಟು ಮಾಡಿ ಅದರ ಭವಿಷ್ಯಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆಯಿದೆ. ವಿಚ್ಛೇದನೆ ಬಳಿಕ ಅಮ್ಮನ ಬಳಿ ಬೆಳೆಯೋ ಮಗು ಅಪ್ಪನ ಬಗ್ಗೆ ದ್ವೇಷದ ಭಾವನೆ ಬೆಳೆಸಿಕೊಳ್ಳಬಹುದು. ಇಲ್ಲವೆ ಅಪ್ಪನನ್ನುತುಂಬಾ ಮಿಸ್ ಮಾಡಿಕೊಂಡು, ಮಾನಸಿಕ ಯಾತನೆ ಅನುಭವಿಸಬಹುದು.ಈ ನೋವು ಆ ಮಗುವಿನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋ. ಜೊತೆ ಭವಿಷ್ಯದಲ್ಲಿ ಮಗು ಕೈಗೊಳ್ಳೋ ಎಲ್ಲ ನಿರ್ಧಾರಗಳ ಜೊತೆಗೆ ವಿಷಯಗಳ ಗ್ರಹಿಕೆ ಮೇಲೂ ಪರಿಣಾಮ ಬೀರಬಲ್ಲದು.ಅಷ್ಟೇ ಅಲ್ಲ ಮಗುವಿನಲ್ಲಿ ಗೊಂದಲದ ಮನಸ್ಥಿತಿ ಬೆಳೆಯೋ ಎಲ್ಲ ಸಾಧ್ಯತೆಗಳೂ ಇವೆ.

ಹೊಂದಾಣಿಕೆ ಏಕೆ ಸಾಧ್ಯವಿಲ್ಲ?
ಒಂದೇ ಮನೆಯಲ್ಲಿರೋವಾಗ ಅಪ್ಪ, ಅಮ್ಮ, ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರ ನಡುವೆಯೋ ಸಣ್ಣಪುಟ್ಟ ಜಗಳ ನಡೆಯೋದು ಸಾಮಾನ್ಯ. ಅಕ್ಕನೊಂದಿಗೋ, ಅಣ್ಣನೊಂದಿಗೋ ಜಗಳವಾಡಿ, ಆಮೇಲೆ ಸಂಧಾನ ಮಾಡಿಕೊಳ್ಳೋ ಪ್ರಸಂಗಗಳು ಅನೇಕ. ಅದೇ ಸೂತ್ರವನ್ನು ಪತಿ ಹಾಗೂ ಪತ್ನಿಗೂ ಅನ್ವಯಿಸಿ ನೋಡೋ ಯೋಚನೆಯನ್ನು ಒಮ್ಮೆ ಮಾಡಿ ನೋಡಿ. ನಿಮ್ಮಿಬ್ಬರ ನಡುವೆ ಹೊಂದಾಣಿಕೆಗೆ ತೊಡಕಾಗಿರೋ ವಿಷಯಗಳನ್ನು ಗುರುತಿಸಿ. ನಿಮ್ಮ ಮಗು ಅಥವಾ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆಗೆ ಪ್ರಯತ್ನಿಸಿ.

Call us

ಕೂತು ಮಾತನಾಡಿ ಪರಿಹರಿಸಿಕೊಳ್ಳಲಾಗದಂತಹ ಸಮಸ್ಯೆಯೇ?
ಬಹುತೇಕ ವಿಚ್ಛೇದನೆಗಳ ಹಿಂದಿರೋದು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು. ಇಬ್ಬರೂ ಎದುರು-ಬದಿರು ಕೂತು ಮಾತನಾಡಿ ಪರಿಹರಿಸಿಕೊಳ್ಳಬಹುದಾದ ವಿಷಯಗಳು ಕೋರ್ಟ್ ಮೆಟ್ಟಿಲೇರಿ ವಿಚ್ಛೇದನೆಯಲ್ಲಿ ಕೊನೆಗೊಳ್ಳುತ್ತಿವೆಯಷ್ಟೇ. ಆದಕಾರಣ ವಿಚ್ಛೇದನೆ ನಿರ್ಧಾರ ಕೈಗೊಳ್ಳೋ ಮುನ್ನ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ

ಕೌನ್ಸೆಲಿಂಗ್ಗೆ ಒಮ್ಮೆ ಭೇಟಿ ನೀಡಿ.
ಇಬ್ಬರು ಕೂತು ಮಾತನಾಡಿದ್ರೂ ಸಮಸ್ಯೆ ಬಗೆಹರಿದಿಲ್ಲ ಎಂದಾದ್ರೆ ಆಪ್ತಸಮಾಲೋಚಕರನ್ನು ಭೇಟಿಯಾಗಿ ಕೌನ್ಸೆಲಿಂಗ್ಗೆ ಒಳಪಡೋ ಬಗ್ಗೆ ಯೋಚಿಸಬಹುದು. ಎಷ್ಟೋ ಸಮಸ್ಯೆಗಳು ಕೌನ್ಸೆಲಿಂಗ್ ಬಳಿಕ ಸುಖಾಂತ್ಯ ಕಂಡಿವೆ. ಹೀಗಾಗಿ ನೀವು ಕೂಡ ಈ ಪ್ರಯತ್ನವನ್ನು ಮಾಡಬಹುದು.

ವಿಚ್ಛೇದನೆ ಬಳಿಕ ಬದುಕು?
ಡೈವೋರ್ಸ್ ತೆಗೆದುಕೊಳ್ಳೋದು ಸುಲಭದ ಕೆಲಸ. ಆದ್ರೆ ಆ ನಂತರದ ಬದುಕು? ಈ ಬಗ್ಗೆ ಕೂಡ ಯೋಚಿಸೋದು ಅಗತ್ಯ ವಿಚ್ಛೇದನೆ ಬಳಿಕ ಬದುಕು ಮೊದಲಿನಂತೆ ಖಂಡಿತಾ ಇರೋದಿಲ್ಲ. ಒಂದಿಷ್ಟು ಬದಲಾವಣೆಯಾಗಿಯೇ ಆಗುತ್ತೆ. ಅದನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧರಿದ್ದೀರಾ ಎಂಬುದನ್ನು ಯೋಚಿಸಿ. ಮಗುವಿನಿಂದ ದೂರವಿರೋದು ಸಾಧ್ಯವೇ? ಮುಂದೆ ಒಂಟಿಯಾಗಿ ಇರುತ್ತೀರೋ ಅಥವಾ ಬೇರೆ ಸಂಗಾತಿಯನ್ನು ಆರಿಸಿಕೊಳ್ಳುತ್ತೀರೋ ಎಂಬ ಯೋಚನೆಯೂ ಅಗತ್ಯ.

ಮರುಮದುವೆಯಿಂದ ಮಗುವಿನ ಮೇಲಾಗುವ ಪರಿಣಾಮ.
ಅಮ್ಮ ಅಥವಾ ಅಪ್ಪ ಮರುವಿವಾಹವಾದರೆ ಅದು ಮಗುವಿನ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇನ್ನೊಬ್ಬರನ್ನು ಅಪ್ಪ ಅಥವಾ ಅಮ್ಮನ ಸ್ಥಾನದಲ್ಲಿ ನೋಡೋದು ಆ ಪುಟ್ಟ ಮನಸ್ಸಿಗೆ ಸಂಕಟದ ವಿಷಯವೇ ಸರಿ. ಹೀಗಾಗಿ ವಿಚ್ಛೇದನೆಗೂ ಮುನ್ನ ಮಗುವಿನ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ವಿಶ್ಲೇಷಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

11 + 6 =