ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಅತ್ಯಗತ್ಯ: ಡಾ. ರಮೀಲಾ ಶೇಖರ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ:
ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಅತ್ಯಗತ್ಯ. ಏನೇ ಸಮಸ್ಯೆಯಿದ್ದರೂ, ಯಾವುದೇ ಬಗೆಯ ಸವಾಲು- ತೊಂದರೆಗಳಿದ್ದರೂ ವಿದ್ಯಾರ್ಥಿಗಳು ಅದನ್ನು ವ್ಯಕ್ತಪಡಿಸಬೇಕು. ಭಾವನೆಗಳನ್ನು ವ್ಯಕ್ತಪಡಿಸದಿದ್ದರೆ ಮುಂದೆ ಅದು ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಮಸ್ಯೆಗಳಿದ್ದಾಗ ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧ ಪಟ್ಟವರಿಗೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕು. ಆಂತರಿಕ ದೂರು ನಿರ್ವಹಣಾ ಸಮಿತಿಗಳು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ದೊಡ್ಡ ಸಹಾಯ ಮಾಡಬಲ್ಲವು. ಎಂದು ಮಂಗಳೂರಿನ ಮನ:ಶಾಂತಿ ಕೌನ್ಸಿಲಿಂಗ್ ಸಂಸ್ಥೆಯ ಮೆಂಟಲ್ ಹೆಲ್ತ್ ಪ್ರೊಫೆಶನಲ್ ಹಾಗೂ ಟ್ರೈನರ್ ಡಾ. ರಮೀಲಾ ಶೇಖರ್ ಹೇಳಿದರು.

Call us

Call us

ಅವರು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ದೂರು ನಿರ್ವಹಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

Call us

Call us

ಮಾನಸಿಕ ಒತ್ತಡದಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ ಡಾ.ರಮೀಲಾ, ನಿತ್ಯ ವ್ಯಾಯಾಮ, ಆತ್ಮವಿಶ್ವಾಸಪೂರ್ವಕ ನಡೆ ನುಡಿ ಮಾನಸಿಕ ಸದೃಢತೆಯನ್ನು ಒದಗಿಸುತ್ತದೆ. ಜೊತೆಗೆ ನಾವು ಮಾಡುವ ಒಳ್ಳೆಯ ಕೆಲಸಗಳು, ಇ?ದ ಜವಾಬ್ದಾರಿಗಳು ಎ? ಸಲ ನಮಗಿರುವ ಒತ್ತಡವನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ವಿದ್ಯಾರ್ಥಿಗಳಿಗೆ ಬದುಕಿನ ಎಲ್ಲ ಬಗೆಯ ಅನುಭವಗಳಿರಬೇಕು. ನೋವು, ಸೋಲು, ಸವಾಲುಗಳನ್ನು ಎದುರಿಸಲು ಕಲಿತಾಗ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಸಾಧ್ಯ. ಆಂತರಿಕ ದೂರು ನಿರ್ವಹಣಾ ಸಮಿತಿ ವಿದ್ಯಾರ್ಥಿಗಳಿಗೆ ಎಲ್ಲ ಬಗೆಯ ಸಹಕಾರ ನೀಡಲು ಬದ್ಧವಾಗಿದೆ. ಏನೇ ಸಮಸ್ಯೆಗಳಿದ್ದರೂ, ದೂರುಗಳಿದ್ದರೂ ವಿದ್ಯಾರ್ಥಿಗಳು ಅದನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶಗಳನ್ನು ಈ ಸಮಿತಿ ಒದಗಿಸಲಿದೆ. ಎಲ್ಲ ವಿದ್ಯಾರ್ಥಿಗಳಿಗಳೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಲಿಸ್ಸಿ ಸಾಜಿ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಎನ್. ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ರಶ್ಮಿ ಅರಸ್, ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಲತಾ ವಿದ್ಯಾಧರ್ ಉಪಸ್ಥಿತರಿದ್ದರು.

ಆಂತರಿಕ ದೂರು ನಿರ್ವಹಣಾ ಸಮಿತಿಯ ಸಂಯೋಜಕಿ ಉಷಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಮಮತಾ ವಂದಿಸಿದರು. ಉಪನ್ಯಾಸಕಿ ದಿವ್ಯಶ್ರೀ ಡೆಂಬಳ ನಿರೂಪಿಸಿದರು.

Leave a Reply

Your email address will not be published. Required fields are marked *

four × 1 =