ವಿದ್ಯಾರ್ಥಿಗಳ ಶೈಕ್ಷಣಿಕ ಮುನ್ನಡೆಗೆ ಮಾಧ್ಯಮ ಸಹಕಾರಿ: ಚಂದ್ರ ಕೆ. ಹೆಮ್ಮಾಡಿ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿದ್ಯಾರ್ಥಿಗಳು ಕಲಿಕೆಯಲ್ಲಿ ಯಶಸ್ಸು ಸಾಧಿಸಲು ನಿರಂತರ ಓದು ಮತ್ತು ಅಧ್ಯಯನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸುದ್ದಿ ಹಾಗೂ ದೃಶ್ಯಮಾಧ್ಯಮಗಳು ಜ್ಞಾನದ ವಿವಿಧ ಮಗ್ಗುಲುಗಳನ್ನು ಜನರಿಗೆ ಪರಿಚಯಿಸುವುದಲ್ಲದೇ, ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ಒದಗಿಸುವುದರಿಂದ ಮಾಧ್ಯಮಗಳು ವಿದ್ಯಾರ್ಥಿಗಳಿಗೆ ಪಾಲಿಗೆ ಜ್ಞಾನ ಸಂಗ್ರಹದ ಮೂಲ ಭಂಡಾರದಂತಿವೆ. ಸಕಾರಾತ್ಮಕ ಓದು ಹಾಗೂ ಒಳ್ಳೆಯ ಅಭಿರುಚಿಯ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಾಗ ಅವರ ಶೈಕ್ಷಣಿಕ ಮುನ್ನಡೆಗೆ ಸಹಕಾರಿಯಾಗುತ್ತದೆ ಎಂದು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಹೇಳಿದರು.

Call us

Call us

Click Here

Visit Now

ಗೋಳಿಹೊಳೆ ದೀಕ್ಷಾ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ದೀಕ್ಷಾ ಡಾನ್ಸ್ ಅಕಾಡೆಮಿ ಆರಂಭದ ಪ್ರಯುಕ್ತ ಇಲ್ಲಿನ ಕೊಡಿಯಾಲ್‌ಕೇರಿ ಪರಿಸರದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ವಿಶೇಷ ಶಿಬಿರದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶೈಕ್ಷಣಿಕ ಮುನ್ನಡೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ತಾವು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಮತ್ತು ಶ್ರದ್ಧೆಯನ್ನು ಹೊಂದಿರುತ್ತಾರೋ ಅದೇ ಕ್ಷೇತ್ರದಲ್ಲಿ ಮುಂದುವರಿದು ಸಾಧನೆ ಮಾಡಲು ಪ್ರಯತ್ನ ನಡೆಸುವುದು ಉತ್ತಮ. ಆದರೆ ತಮ್ಮ ಆಸಕ್ತಿಯ ಒಳಿತು ಮತ್ತು ಕೆಡುಕುಗಳ ಬಗ್ಗೆ ಎಚ್ಚರ ವಹಿಸುವುದು ತೀರಾ ಆವಶ್ಯಕ. ಮಾಧ್ಯಮಗಳಲ್ಲಿ ಬರುವ ಉತ್ತಮ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಪಾಲಕರು ಅಥವಾ ಶಿಕ್ಷಕರು ಉತ್ತೇಜನ ನೀಡಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆಯೂ ವಿದ್ಯಾರ್ಥಿಗಳು ಎಚ್ಚರತಪ್ಪದಂತೆ ಹಿರಿಯರು ಜಾಗರೂಕತೆ ವಹಿಸಲೇಬೇಕಿದೆ ಎಂದರು.

Click here

Click Here

Call us

Call us

ದೀಕ್ಷಾ ಸಂಸ್ಥೆ ಸಂಚಾಲಕ ಎಸ್. ಪಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತರಬೇತುದಾರರಾದ ಆನಂದ ಎಚ್. ಮತ್ತು ಮಂಜುನಾಥ ಎಂ. ಉಪಸ್ಥಿತರಿದ್ದರು. ಶಿಕ್ಷಕಿ ರಜಿತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸಂಗೀತಾ ವಂದಿಸಿದರು.

golihole deeksha news matter

Leave a Reply

Your email address will not be published. Required fields are marked *

two × 3 =