ವಿದ್ಯಾರ್ಥಿನಿ ಅಕ್ಷತಾ ಕೊಲೆ ಆರೋಪಿ ಬಂಧನ

Call us

Call us

ಬೈಂದೂರು: ಇಲ್ಲಿನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿಧ್ಯಾರ್ಥಿನಿ, ಹೇನಬೇರು ಹೊಸಹಕ್ಲು ನಿವಾಸಿ ಬಾಬು ದೇವಾಡಿಗ ಮತ್ತು ರಾಧಾ ದಂಪತಿಗಳ ಪುತ್ರಿ ಅಕ್ಷತಾ ಸಾವಿನ ಪ್ರಕರಣವನ್ನು ಭೇದಿಸಲು ಉಡುಪಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಅಕ್ಷತಾಳನ್ನು ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಯೋಜನಾನಗರ ನಿವಾಸಿ ಸುನಿಲ್ (19) ಹಾಗೂ ಸಾಕ್ಷ ನಾಶಪಡಿಸಿದ ಆರೋಪದಲ್ಲಿ ಅಕ್ಷಯ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.

Call us

Call us

Visit Now

ಪ್ರಕರಣದ ಹಿನ್ನೆಲೆ
ಎಂದಿನಂತೆ ಅಕ್ಷತಾ ಬೆಳಿಗ್ಗೆ ಕಾಲೇಜಿಗೆ ಹೊದವಳು ಸಂಜೆ ಮನೆಗೆ ಬಾರದೇ ಇದ್ದುದರಿಂದ ಆತಂಕಗೊಂಡ ಆಕೆಯ ಮನೆಯವರು ಹಾಗೂ ಊರವರು ಹೇನ್‌ಬೇರು ಹಾಡಿ ಪ್ರದೇಶದಲ್ಲಿ ಆಕೆಯನ್ನು ಹುಡುಕಾಡುತ್ತಿರುವಾಗ ಸಂಜೆ 6:15 ಘಂಟೆಗೆ ಹೇನ್‌ ಬೇರು ಕಾಸನಮರದ ಜಡ್ಡು ಎಂಬಲ್ಲಿ ಅರಣ್ಯ ಇಲಾಖೆಯ ಅಕೇಶಿಯಾ ನೆಡುತೋಪಿನಲ್ಲಿ ಅಕ್ಷತಾಳ ಮೃತದೇಹ ಹಾಗೂ ಆಕೆಯ ಬ್ಯಾಗ್‌, ಕೊಡೆ, ಹಾಗೂ ನೀರಿನ ಬಾಟಲಿ ಕಂಡು ಪತ್ತೆಯಾಗಿತ್ತು.

Click here

Call us

Call us

ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಮೂರು ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಕುಮಾರಿ ಅಕ್ಷತಾಳು ಕಾಲೇಜು ಮುಗಿಸಿ ಮನೆಗೆ ಒಬ್ಬಳೇ ಹಿಂದಿರುಗುವ ಸಮಯ ಆರೋಪಿ ಆಕೆಯನ್ನು ಚುಡಾಯಿಸಿದ್ದಾನೆ. ಆದರೆ ಅದಕ್ಕೆ ಜಗ್ಗದ ಅಕ್ಷತಾ ಸೀದಾ ಮನೆಯ ಹಾದಿ ಹಿಡಿದಿದ್ದಾಳೆ. ಆದರೂ ಆಕೆಯನ್ನು ಹಿಂಬಾಲಿಸಿ, ಅವಳದೇ ಚೂಡಿದಾರದ ವೇಲ್‌ನಿಂದ ಕತ್ತು ಹಿಸುಕಿ ಕೊಲೆಮಾಡಿದ್ದು, ನಂತರ ಆಕೆಯ ಮೇಲೆ ಲೈಗಿಂಕ ದೌರ್ಜನ್ಯ ನಡೆಸಲು ಯತ್ನಿಸಿದ್ದ.
ಕೊನೆಗೆ ಅವಳು ಮೃತಪಟ್ಟಿರುವುದು ದೃಢವಾದಾಗ ಆಕೆಯ ಬ್ಯಾಗ್, ಕೊಡೆಯನ್ನು ಅವಳ ಪಟ್ಟದಲ್ಲಿಟ್ಟು ಅವಳ ಮೈಮೇಲೆ ಮಲಗಿ ವಿಕೃತ ಸುಖ ಅನುಭವಿಸಿ ಅಲ್ಲಿಂದ ಹೇನಬೇರು ಕಡೆಗೆ ಓಡಿಹೋಗಿದ್ದಾನೆ. ಅಕ್ಷತಾಳ ಮನೆಯ ಹಾದಿಯ ಸಮೀಪದ ಕಾಲುದಾರಿಯಲ್ಲಿ ಇರುವ ಸಣ್ಣ ತೋಡಿನಲ್ಲಿ ಕೈಕಾಲುಗಳನ್ನು ತೊಳೆದುಕೊಂಡು ಬಳಿಕ ಮನೆಯ ಹಾದಿ ಹಿಡಿದಿದ್ದಾನೆ.

ಪ್ರಕರಣವನ್ನು ಬೇದಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಿ 17 ಮಂದಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು 3 ಮಂದಿಯ ಮೇಲೆ ಬಲವಾದ ಸಂಶಯ ಹೊಂದದ್ದರು. ಅದರಂತೆ ಸುನಿಲ್, ಅಕ್ಷಯ್ ಹಾಗೂ ಮಂಜುನಾಥ ಎಂಬುವವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸುನಿಲ್ ಪ್ರಕರಣದ ನೈಜ ಆರೋಪಿ ಎಂಬುದು ತಿಳಿದು ಬಂದಿತ್ತು. ಅಕ್ಷಯ್ ಪೊಲೀಸರಿಗೆ ಸುಳ್ಳು ಮಾಹಿತಿಯನ್ನು ನೀಡಿ ಪ್ರಕರಣದ ಹಾದಿ ತಪ್ಪಿಸುದ ಕಾರಣಕ್ಕಾಗಿ ಆತನನ್ನೂ ಬಂಧಿಸಿದ್ದಾರೆ. ಸುನಿಲ್ ಗೆ ಅತ್ಯಾಚಾರ ಹಾಗೂ ಕೊಲೆ ಆರೋಪ ಹಾಗೂ ಅಕ್ಷಯ್ ಗೆ ಸಾಕ್ಷ ನಾಶ ಆರೋಪದಡಿಯಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ

ಬೈಂದೂರು ಕಾಲೇಜು ವಿದ್ಯಾರ್ಥಿನಿ ನಿಗೂಢ ಸಾವು. ಕೊಲೆ ಶಂಕೆ

ವಿದ್ಯಾರ್ಥಿನಿ ಅಕ್ಷತಾ ಸಾವು: ಪ್ರತಿಭಟನೆ, ಚುರುಕುಗೊಂಡ ತನಿಕೆ

ಅಕ್ಷತಾ ಸಾವು: ಎರಡನೇ ದಿನವೂ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ

Akshatha Murder_Suspected Arrected (2) Akshatha Murder_Suspected Arrected (6) Akshatha Murder_Suspected Arrected (9) Akshatha Murder_Suspected Arrected by Udupi SP Annamalai (1)

Leave a Reply

Your email address will not be published. Required fields are marked *

three × two =