ವಿದ್ಯುತ್ ಕಂಬವನ್ನು ಸುತ್ತವರಿದ ಬಳ್ಳಿಗಳು

Call us

ಗಂಗೊಳ್ಳಿ: ನೆಲದ ಮೇಲೆ ಬೆಳೆದ ಹೂಬಳ್ಳಿಗಳು ಗಿಡ ಗಂಟಿಗಳು ಹತ್ತಿರದಲ್ಲಿರುವ ಮನೆ, ಅಂಗಡಿ ಮುಗ್ಗಟ್ಟು ಅಥವಾ ಕಂಬಗಳನ್ನು ಹತ್ತಿ ಬೆಳೆಯುವುದು ಮಳೆಗಾಲದಲ್ಲಿ ಸಾಮಾನ್ಯ. ಆದರೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಶ್ರೀ ಚಕ್ರೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ವಿದ್ಯುತ್ ಕಂಬವೊಂದರ ಮೇಲೆ ಬಳ್ಳಿಗಳು ದೊಡ್ಡದಾಗಿ ಬೆಳೆದು ವಿದ್ಯುತ್ ತಂತಿ ಸಮೇತ ಕಂಬವನ್ನು ಆವರಿಸುತ್ತಿದೆ.

Call us

ಇಷ್ಟಿದ್ದರೂ ಮೆಸ್ಕಾಂ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿದ್ದು, ಕಂಬವನ್ನು ಸುತ್ತುವರಿದಿರುವ ಬಳ್ಳಿಗಳನ್ನು ಕತ್ತರಿಸುವ ಗೋಜಿಗೆ ಹೋಗಿಲ್ಲ. ಇದು ಮುಂದಿನ ದಿನಗಳಲ್ಲಿ ಅನಾಹುತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಮೆಸ್ಕಾಂ ಅಧಿಕಾರಿಗಳು ಇತ್ತಮ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚಿತ್ರ: ಸುರಭಿ ಗಂಗೊಳ್ಳಿ

Leave a Reply

Your email address will not be published. Required fields are marked *

1 × one =