ವಿದ್ಯೆ ಬದುಕಿನಲ್ಲಿ ಗಳಿಸಬಹುದಾದ ದೊಡ್ಡ ಆಸ್ತಿ: ಡಾ ಜಿ. ಶಂಕರ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ಮಾಡುತ್ತಾ ಬಂದಿದ್ದು, ಮುಂದೆಯೂ ಕೂಡಾ ಸಜಮಾದ ಬೆನ್ನಿಗೆ ಟ್ರಸ್ಟ್ ನಿಲುತ್ತದೆ. ವಿದ್ಯೆ ಅಪಹರಿಸಲಾಗದ ಸಂಪತ್ತಾಗಿದ್ದು, ಎಲ್ಲಾ ಆಸ್ತಿಗಿಂತಲೂ ವಿದ್ಯೆ ಬದುಕಿನಲ್ಲಿ ಗಣಿಸಬಹುದಾದ ದೊಡ್ಡ ಆಸ್ತಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿಂ.ಶಂಕರ್ ಹೇಳಿದರು.

Call us

Call us

Call us

ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಕುಂದಾಪುರ ರೋಟರಿ ಲಕ್ಷೀನರಸಿಂಹ ಸಭಾಭವನದಲ್ಲಿ ನಡೆದ ಉಚಿತ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಉದ್ಘಾಟಿಸಿ ಮಾತಾನಾಡುತ್ತಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ವಿದ್ಯಾರ್ಥಿಗಳಿಗೆ ಶಾಲಾರಂಭಕ್ಕೂ ಮುನ್ನಾ ನೋಟ್ ಬುಕ್ ಸಿಕ್ಕರೆ ಉತ್ತಮ ಎನ್ನುವ ಹಿನ್ನೆಲೆಯಲ್ಲಿ ಹೊಸನಗರ, ಸಾಗರ, ಶಿವಮೊಗ್ಗೆ, ಉಡುಪಿ ಹಾಗೂ ಕುಂದಾಪುರದಲ್ಲಿ ಪ್ರತಿಭಾಮವಂತ ಸುಮಾರು 10ಸಾವಿರ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷೆ ಗಣೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಬಗ್ವಾಡಿ ಮೊಗವೀರ ಮಹಾಜನ ಸಂಘ ಕುಂದಾಪುರ ಶಾಖೆ ಅಧ್ಯಕ್ಷ ಕೆ.ಕೆ.ಕಾಂಚನ್ ಇದ್ದರು. ಸುಧಾಕರ ಕಾಂಚನ್ ನಿರೂಪಿಸಿದರು.

Leave a Reply

Your email address will not be published. Required fields are marked *

6 + six =