ವಿನಾಯಕ ಟಾಕೀಸ್‌ನಲ್ಲಿ ಮೊದಲ ಬಾರಿಗೆ ಬಿಲಿಂಡರ್ ಚಿತ್ರದ ನಾಯಕನ ಕಟೌಟ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಕುಂದಗನ್ನಡದ ಚಿತ್ರ ಬಿಲಿಂಡರ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಚಿತ್ರದ ಎರಡು ಹಾಡುಗಳಿಗೆ ಪವರ್‌ಸ್ಟಾರ್ ಪುನಿತ್, ರೋರಿಂಗ್ ಸ್ಟಾರ್ ಶ್ರೀಮುರಳಿ ಧ್ವನಿಯಾಗಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವುದು ತಿಳಿದೇ ಇದೆ. ಚಿತ್ರ ಬಿಡುಗಡೆಯಾದ ಬಳಕವೂ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚಿಗೆ ಗಳಿಸುತ್ತಿದೆ.

Call us

ಇನ್ನು ಕುಂದಾಪುರದ ಇತಿಹಾಸದಲ್ಲೇ ಮೊದಲ ಬಾರಿಗೆಂಬಂತೆ ವಿನಾಯಕ ಚಿತ್ರಮಂದಿರ ಎದುರು ಬಿಲಿಂಡರ್ ಚಿತ್ರದ ನಾಯಕ ರವಿ ಬಸ್ರೂರ್ ಅವರ ಕಟೌಟ್ ಎದ್ದು ನಿಂತಿದೆ. ಚಿತ್ರಕಲಾವಿದ ಕಾರ್ತಿಕ್ ಬಸ್ರೂರ್ ಎಂಬುವವರು ಸ್ವತಃ ಆಸಕ್ತಿ ವಹಿಸಿ ತಮ್ಮ ನೆಚ್ಚಿನ ಬಿಲಿಂಡರ್ ಚಿತ್ರಕ್ಕಾಗಿ ಪೆಂಟ್ ಮಾಡಿಕೊಟ್ಟಿದ್ದಾರೆ. ಇದು ಕುಂದಾಪ್ರ ಕನ್ನಡ ಚಿತ್ರವೊಂದಕ್ಕೆ ತೋರುತ್ತಿರವ ಅಭಿಮಾನ ಎಂಬುವುದರಲ್ಲಿ ಎರಡು ಮಾತಿಲ್ಲ. ಕುಂದಾಪುರದ ವಿನಾಯಕ ಚಿತ್ರಮಂದಿರ ಮುಂಭಾಗದಲ್ಲಿ ಹಾಕಲಾಗಿರುವ ಈ ಕಟೌಟ್ ಸಾರ್ವಜನಿಕರು ಹಾಗೂ ಚಿತ್ರರಸಿಕರ ಗಮನ ಸೆಳೆಯುತ್ತಿದೆ.

Bilindar-Movie-hero-Ravi-Basrur Cutout in Vinayaka theatre kundapura (4) Bilindar-Movie-hero-Ravi-Basrur Cutout in Vinayaka theatre kundapura (1) Bilindar-Movie-hero-Ravi-Basrur Cutout in Vinayaka theatre kundapura (2) Bilindar-Movie-hero-Ravi-Basrur Cutout in Vinayaka theatre kundapura (3)

Leave a Reply

Your email address will not be published. Required fields are marked *

three − 1 =