ವಿವೇಕ ಪರ್ವ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್ ಬೆಂಬಲ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆಯ ಅಂಗವಾಗಿ ಜ.೨೮ರಂದು ಬೈಂದೂರಿನಲ್ಲಿ ಸಮರ್ಥ ಭಾರತ ಸಂಘಟನೆ ಹಮ್ಮಿಕೊಂಡಿರುವ ವಿವೇಕ ಪರ್ವ ಸಾರ್ವಜನಿಕ ಸಮಾರಂಭಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೈಂದೂರು ಪ್ರಖಂಡ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವಿಹಿಂಪ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು.

Call us

ಬೈಂದೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶದಡಿಯಲ್ಲಿ ಸಮರ್ಥ ಭಾರತ ಬೈಂದೂರು ಹಮ್ಮಿಕೊಂಡಿರುವ ವಿವೇಕ ಪರ್ವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣದ ಸಹಸಂಘಚಾಲಕ ಡಾ. ವಾಮನ ಪೈ, ಚಿತ್ರನಟ ಉಪೇಂದ್ರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಯಡ್ತರೆ ಬೈಪಾಸ್‌ನಿಂದ ಬೈಂದೂರು ಗಾಂಧಿ ಮೈದಾನದ ತನಕ ಬೃಹತ್ ಶೋಭಾಯಾತ್ರೆ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸ್ವಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ವಿನಂತಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಬೈಂದೂರು ಪ್ರಖಂಡ ಪ್ರಮುಖರಾದ ಪ್ರಶಾಂತ ಶೆಟ್ಟಿ, ನಿತ್ಯಾನಂದ ಉಪ್ಪುಂದ, ಮಂಗೇಶ್ ಶಾನುಭಾಗ್, ಜಗದೀಶ್ ಕೊಲ್ಲೂರು, ಮಹೇಶ್ ವಂಡ್ಸೆ, ರಾಜು ಮರವಂತೆ, ಪ್ರಶಾಂತ್ ತಲ್ಲೂರು, ರಾಘವೇಂದ್ರ ಮರವಂತೆ, ಉಮೇಶ್ ಪಡುವರಿ, ವಿನೋದ್, ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × 2 =