ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಲೇಖಕಿ ಜ್ಯೋತಿ ದೇವಾಡಿಗ

Call us

ಕುಂದಾಪುರ: ಮರವಂತೆಯ ಸಾಧಕಿ ಜ್ಯೋತಿ ಎಸ್. ದೇವಾಡಿಗ ಅವರಿಗೆ ‘ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ದೊರೆತಿದೆ. ಶಯದೇವಿಸುತೆ ಬಿರುದಾಂಕಿತ ಜ್ಯೋತಿ ಎಸ್. ಅವರು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನ ಸ್ವರ್ಧೆಯಲ್ಲಿ ವಿಜೇತರಾಗಿದ್ದು ಅವರ ಕವನಕ್ಕೆ ಈ ಪುರಸ್ಕಾರ ದೊರೆತಿದೆ.

Call us

ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪುರವರ 111ನೇ ಜನ್ಮದಿನ ಹಾಗೂ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ವರಕವಿ ದ.ರಾ. ಬೇಂದ್ರೆ ಸವಿನೆನಪಿನ ರಾಜ್ಯಮಟ್ಟದ ಅದ್ಧೂರಿ ಸಾಹಿತ್ಯೋತ್ಸವ ಸಂಭ್ರಮದಲ್ಲಿ ಹೆಸರಾಂತ ಕವಿ ಹಾಗೂ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಅವರಿಗೆ ಈ ಪುರಸ್ಕಾರ ಪ್ರದಾನಿಸಲಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಮೇರು ಪ್ರತಿಭೆಯ ಲೇಖಕರೂ, ಕಲಾರಾಧಕರೂ ಆದ ಜ್ಯೋತಿ ಅವರಿಗೆ ಈ ಹಿಂದೆ ಕಲೆ ಮತ್ತು ಯಕ್ಷಗಾನ, ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ, “ರಂಗಸ್ಠಳ ರತ್ನ ಪ್ರಶಸ್ತಿ” ಹಾಗೂ, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ -2015ನ್ನು ಪಡೆದಿದ್ದರು.

news maravanthe1 news maravanthe2

Leave a Reply

Your email address will not be published. Required fields are marked *

18 + five =