ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೋಡಿ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಡಿ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿಯಾದ ವಾಣಿ ವಿ. ಆಳ್ವ, ಪುರಸಭಾ ಸದ್ಯರಾದ ಪುಷ್ಪ ಶೇಟ್, ಜ್ಯೋತಿ , ಗುಣರತ್ನ, ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು, ಆರೋಗ್ಯ ನಿರೀಕ್ಷಕರಾದ ಶರತ್ ಎಸ್ ಖಾರ್ವಿ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಮಂಜುನಾಥ ನಾಯ್ಕ, ಪೌರಕಾರ್ಮಿಕರು ಮತ್ತು ಸದ್ರಿ ವಾರ್ಡಿನ ಸಾರ್ವಜನಿಕರು ಭಾಗವಹಿಸಿ ಉತ್ತಮ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕೋಡಿ ಬ್ಯಾರೀಸ್ ಶಾಲೆ ರಾಮ ವಿದ್ಯಾಕೇಂದ್ರ ವಿಧ್ಯಾರ್ಥಿಗಳಿಗೆ ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು ಕುಂದಾಪುರ ಪುರಸಭೆ ಇವರು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು.

 

Leave a Reply

Your email address will not be published. Required fields are marked *

12 − 5 =