ವೈಯಕ್ತಿಕ ವಿಚಾರ ಮುಂದಿಟ್ಟು ಆನಗಳ್ಳಿ ಗ್ರಾಮದ ಹೆಸರು ಕೆಡಿಸಲಾಗುತ್ತಿದೆ: ಗ್ರಾಮಸ್ಥರ ಆಕ್ರೋಶ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಆನಗಳ್ಳಿ ಗ್ರಾಮದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವಂತ ಹೇಳಿಕೆ ನೀಡಿರುವ ರಂಗಕರ್ಮಿ ಸುರೇಶ ಆನಗಳ್ಳಿ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು ಎಂದು ಆನಗಳ್ಳಿ ಗ್ರಾಮಸ್ಥ ಭಾಸ್ಕರ ಬಿಲ್ಲವ ಹೇಳಿದ್ದಾರೆ.

Call us

Click Here

Click here

Click Here

Call us

Visit Now

Click here

ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುರೇಶ ಆನಗಳ್ಳಿ ಅವರು ಅವರ ಸೋದರನ ಮೇಲೆ ನಡೆದಿರುವ ಹಲ್ಲೆಯನ್ನು ಮುಂದಿಟ್ಟುಕೊಂಡು ಆನಗಳ್ಳಿ ಗ್ರಾಮಕ್ಕೆ ಕೆಟ್ಟ ಹೆಸರು ಕಟ್ಟುವುದು ಸರಿಯಲ್ಲ. ವೈಯಕ್ತಿಕ ವಿಚಾರವನ್ನಿಟ್ಟುಕೊಂಡು ಈ ರೀತಿ ಗೊಂದಲಕಾರಿ ಹೇಳಿಕೆ ನೀಡುವುದು ಸರಿಯಲ್ಲ . ಅವರಿಗೆ ಅನ್ಯಾಯವಾಗಿದ್ದರೆ ಕಾನೂನು ಹೋರಾಟ ನಡೆಸಲಿ. ಅದು ಬಿಟ್ಟು ಆನಗಳ್ಳಿ ಗ್ರಾಮದ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಬಾರದು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೆ.ಎಂ.ಗೋಪಾಲ ಮಾತನಾಡಿ ಆನಗಳ್ಳಿಯಲ್ಲಿ ನಾವು ಗೂಂಡಸಂಸ್ಕೃತಿ ಕಂಡಿಲ್ಲ. ಕಪೋಲಕಲ್ಪನೆಯ ವಿಚಾರಗಳನ್ನು ಇಟ್ಟುಕೊಂಡು, ಗ್ರಾಮದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಇಲ್ಲಸಲ್ಲದ ಹೇಳಿಕೆ ನೀಡಬಾರದು. ಈ ಬಗ್ಗೆ ನಾವು ಹೋರಾಟ ನಡೆಸುತ್ತೇವೆ ಎಂದರು. ಸುದ್ಧಿಗೋಷ್ಠಿಯಲ್ಲಿ ಆನಗಳ್ಳಿ ಗ್ರಾ.ಪಂ.ಸದಸ್ಯ ಪ್ರಭಾಕರ, ಗೆಳೆಯರ ಬಳಗದ ರಮೇಶ, ಪ್ರಗತಿ ಯುವಕ ಮಂಡಲದ ಅಣ್ಣಪ್ಪ ಹಾಗೂ ಗಾಡ್ವಿನ್ ಮಸ್ಕರೇನಸ್ ಉಪಸ್ಥಿತರಿದ್ದರು.

ಘಟನೆ ಹಿನ್ನೆಲೆ
► ಕುಂದಾಪುರ ಆನಗಳ್ಳಿ ರೌಡಿಗಳ ಹಿತ್ತಲ ಮನೆಯಾಗಿದೆ – http://kundapraa.com/?p=18280

Leave a Reply

Your email address will not be published. Required fields are marked *

one + twenty =