ಶಂಕರ ಜಯಂತಿ ಸರಣಿ ಕಾರ್ಯಕ್ರಮದ ಉದ್ಘಾಟನೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಶಂಕರ ಜಯಂತಿ ಆಚರಣೆಯು ಬಹಳ ಪವಿತ್ರವಾದ ಕಾರ್ಯ. ಮನುಕುಲದ ಉದ್ಧಾರಕ್ಕೆ ಧಾರ್ಮಿಕ, ಸಂಸ್ಕೃತಿಯನ್ನು ಎತ್ತಿ ಹಿಡಿದು ಹೊಸ ಚರಿತ್ರೆ ಬರೆದ ಪುಣ್ಯತಮ ವ್ಯಕ್ತಿಯ ಕಾರ್ಯ, ಅಳಿವಿನಂಚಿನಲ್ಲಿದ್ದ ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಯಾವುದೇ ಯುದ್ಧಗಳನ್ನು ಮಾಡದೇ ತರ್ಕಗಳ ಮೂಲಕ ಅನ್ಯ ಧರ್ಮದ ಲೋಪ ದೋಷಗಳ ತಿಳಿಸಿ ತರ್ಕಗಳಲ್ಲಿ ಗೆಲ್ಲುದರ ಜೊತೆ ಮನ ಪರಿವರ್ತನೆ ಮಾಡಿ ಹಿಂದೂ ಧರ್ಮದ ಪುನರುತ್ಥಾನಕ್ಕೆ ಶ್ರೀ ಶಂಕರರು ಕಾರಣರು, ಶ್ರೀ ಶಂಕರರು ಸಾಕ್ಷತ್ ದೇವರ ಅವತಾರವಾಗಿದ್ದು, ಮನುಕುಲದ ಉದ್ಧಾರಕ್ಕೆ ಶ್ರೀ ಶಂಕರರ ಕೊಡುಗೆ ಅಪಾರವಾದುದ್ದು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ದಕ್ಷಿಣಾಮ್ನಾಯ ಇವರ ಪ್ರಾಂತೀಯ ಧರ್ಮಧಿಕಾರಿಗಳಾದ ವೇದಮೂರ್ತಿ ಬಡಾಕೆರೆ ಲೋಕೇಶ ಅಡಿಗ ಹೇಳಿದರು.

Call us

Call us

Click Here

Visit Now

ಅವರು ಶಾಂಕರ ತತ್ವ ಪ್ರಸರಣಾ ಸಮಿತಿ ಬೈಂದೂರು ತಾಲೂಕು ಇವರ ವತಿಯಿಂದ ಉಪ್ಪುಂದ ಸುವಿಚಾರ ಬಳಗ ಟ್ರಸ್ಟ್‌ನ ಸಹಯೋಗದಲ್ಲಿ ಉಪ್ಪುಂದ ಶ್ರೀ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಭಾನುವಾರ ಸಂಜೆ ನಡೆದ ಶಂಕರ ಜಯಂತಿ ಆಚರಣೆಯ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅಜ್ಞಾನದಿಂದ ದೇವರನ್ನು ಕಾಣಲಿಕ್ಕೆ ಸಾಧ್ಯವಿಲ್ಲ, ಜ್ಞಾನದಿಂದ ದೇವರನ್ನು ಕಾಣಲು ಸಾಧ್ಯ. ಮೋಕ್ಷ ಸಾಧನೆಗೂ ಜ್ಞಾನವು ಬಹಳ ಪ್ರಧಾನವಾಗಿದೆ ಎಂದು ಹೇಳಿದರು.

Click here

Click Here

Call us

Call us

ಉಪ್ಪುಂದ ಸುವಿಚಾರ ಬಳಗ ಟ್ರಸ್ಟ್‌ನ ಅಧ್ಯಕ್ಷ ಬಿ. ರಾಮಕೃಷ್ಣ ಶೇರೆಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಇದರ ಅಧ್ಯಕ್ಷ ಬಿ. ವಿಶ್ವೇಶ್ವರ ಅಡಿಗ, ಹವ್ಯಕ ಸಭಾ ಕುಂದಾಪರ ತಾಲೂಕು ಇದರ ಅಧ್ಯಕ್ಷ ಎಮ್. ನಾಗರಾಜ್ ಭಟ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಮೂರ್ತಿ ತಿರುಮಲೇಶ್ವರ ಭಟ್ ಮಕ್ಕಿ ದೇವಸ್ಥಾನ ಇವರು ಶಂಕರ ಭಗವತ್ಪಾದರ ಭಾವಚಿತ್ರಕ್ಕೆ ಪೂಜೆ, ನೈವೇದ್ಯ, ಮಂಗಳಾರತಿ ನೆರವೇರಿಸಿದರು. ಉಪ್ಪುಂದ ವಿಪ್ರ ರಂಜಿನಿ ತಂಡದಿಂದ ಶಂಕರಾಚಾರ್ಯರರು ರಚಿಸಿದ ಸ್ತ್ರೋತ್ರಗಳನ್ನು ಪ್ರಸ್ತುತಪಡಿಸಿದರು. ಈ ಸಂಧರ್ಭದಲ್ಲಿ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ೬೦೦ ಕ್ಕೆ ೫೯೦ ಅಂಕ ಗಳಿಸಿ ರಾಜ್ಯಕ್ಕೆ ೫ ನೇ ರ‍್ಯಾಂಕ್ ಗಳಿಸಿದ ರೋಹನ್ ರಾವ್ ಜೆ.ಎಚ್. ಅವರನ್ನು ಟ್ರಸ್ಟ್‌ನ ಪರವಾಗಿ ಹಾಗೂ ಶೃಂಗೇರಿ ಶ್ರೀ ಮಠದ ಪರವಾಗಿ ಅಭಿನಂದಿಸಿ, ಗೌರವಿಸಲಾಯಿತು. ಯು. ಸಂದೇಶ್ ಭಟ್ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಕುಮಾರಿ ವೈಷ್ಣವಿ ಮಯ್ಯ ಪ್ರಾರ್ಥಿಸಿದರು. ಸಂಚಾಲಕ ವಿ.ಹೆಚ್. ನಾಯಕ್ ವಂದಿಸಿದರು. ಸಹಸಂಚಾಲಕ ಯು. ಗಣೇಶ್ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

20 − seventeen =