ಶತಮಾನೋತ್ಸವ ಆಚರಿಸಿಕೊಂಡಿರುವ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡಿರುವ ಕುಂದಾಪುರ ತಾಲೂಕಿನ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿಯಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಹೊಸ ದಾಖಲಾತಿ ಶತಕ ಸನಿಹ ತಲುಪಿದೆ.

Call us

Call us

ಪ್ರಸ್ತುತ 1ರಿಂದ 8ನೇ ತರಗತಿಯಲ್ಲಿ ಒಟ್ಟು 360 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದು, 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ಸುಮಾರು 92 ಮಕ್ಕಳು ಹೊಸ ದಾಖಲಾತಿಯಾಗಿದ್ದಾರೆ. 1ನೇ ತರಗತಿಗೆ 62 ವಿದ್ಯಾರ್ಥಿಗಳೂ ಸೇರಿದಂತೆ ಇನ್ನುಳಿದ ತರಗತಿಗಳಿಗೆ ಗುಜ್ಜಾಡಿ ಸುತ್ತಲಿನ ಸರಕಾರಿ ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಂದ 50ಕ್ಕೂ ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.

Call us

Call us

ಫಲಪ್ರದವಾದ ಪರಿಣಾಮಕಾರಿ ಬೋಧನೆ ಹಾಗೂ ವಿದ್ಯಾಗಮ ಕಾರ್ಯಕ್ರಮ. ಆಕರ್ಷಕ ಶಾಲಾ ಪರಿಸರ, ವಿಶಾಲ ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ವಿಶಾಲ ರಂಗಮಂದಿರವನ್ನು ಹೊಂದಿರುವ ಶಾಲೆಯು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಶತಮಾನೋತ್ಸವದ ನೆನಪಿಗಾಗಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶತಮಾನೋತ್ಸವ ಭವನ ಶಾಲೆಯ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಕ್ರೀಡೆ, ಕಲೆ ಹಾಗೂ ಸಾಹಿತ್ಯಕ್ಕೆ ಶಾಲೆಯಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

9 ಜನ ಸರಕಾರದಿಂದ ನೇಮಕಗೊಂಡಿರುವ ಶಿಕ್ಷಕರು ಹಾಗೂ 3 ಗೌರವ ಶಿಕ್ಷಕರ ಸಹಿತ ನುರಿತ ಹಾಗೂ ಸ್ನೇಹಮಯಿ ಅಧ್ಯಾಪಕ ವೃಂದವನ್ನು ಹೊಂದಿರುವ ಶಾಲೆಯು ಕ್ರಿಯಾಶೀಲ ಎಸ್.ಡಿ.ಎಂ.ಸಿ., ಪೋಷಕ ವೃಂದ, ಶಾಲಾ ಶತಮಾನೋತ್ಸವ ಸಮಿತಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರೋತ್ಸಾಹ ಸಹಕಾರದಿಂದ ಶಾಲಾ ಮುಖ್ಯಶಿಕ್ಷಕ ಆನಂದ ಜಿ. ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಇಂದಿರಾ ನೇತೃತ್ವದಲ್ಲಿ ಯಶಸ್ವಿ ಪಥದತ್ತ ದಾಪುಗಾಲಿಕ್ಕುತ್ತಿದೆ.

Leave a Reply

Your email address will not be published. Required fields are marked *

2 × one =