ಶತಮಾನ ಕಳೆದರು ನೆನಪಿಸುವ ವ್ಯಕ್ತಿತ್ವ ದೇವರಾಜ್ ಅರಸರದ್ದಯ: ಬಿ.ಎಲ್. ಶಂಕರ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಿಲ್ಲಿಸಿ, ಭೂ ಸುಧಾರಣೆ ಚಳುವಳಿ ಪ್ರಾರಂಭ ಮಾಡಿದ ದೇವರಾಜ ಅರಸರು ಭಾರತದಲ್ಲಿ ಸಾರ್ವಕಾಲಿಕ ಮಾದರಿ ರಾಜಕರಣಿಯಾಗಿ ಮಿಂಚಿದವರು ಎಂದು ಬಿ. ಎಲ್ ಶಂಕರ್ ತಿಳಿಸಿದರು.

Click Here

Call us

Call us

Visit Now

ಅವರು ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-೨೦೧೬ ರ ಎರಡನೇ ದಿನದ ‘ಶತಮಾನದ ನಮನ ಡಿ. ದೇವರಾಜ್ ಅರಸು’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಹಳ್ಳಿಗಳಲ್ಲಿ ಯಾರು ಸೋಮಾರಿಗಳಾಗಬಾರದು ಎಂಬ ಸದ್ದೂದೇಶದಿಂದ ನಿರುದ್ಯೋಗಿಗಳಿಗೆಲ್ಲ ಉಪಹಾರ ಗೃಹದಲ್ಲಿ ಕೆಲಸ ಕೊಡಿಸಿ ಮಾನವ ಕಲ್ಯಾಣ ಮಾಡಿದ ಪ್ರಾಮಣಿಕವಾಗಿ ರಾಜಕಾರಣಿ ಎಂದು ತಿಳಿಸಿದರು. ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ್ ಅರಸರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಖಾಸಗಿಯಾಗಿ ಬಡ್ಡಿ ವ್ಯವಹಾರ ಮಾಡುವವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದ ದೇವರಾಜ ಅರಸರದ್ದು ಭಾರತದಲ್ಲಿ ಶತಮಾನ ಕಳೆದರು ನೆನಪು ಮಾಡುವಂತಹ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷರಾದ ಡಾ. ಬಿ ಎನ್ ಸುಮಿತ್ರಾ ಬಾಯಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವ ಹಾಗೂ ನಾ.ದ ಶೆಟ್ಟಿ ಉಪಸ್ಥಿತರಿದ್ದರು.

Click here

Click Here

Call us

Call us

Leave a Reply

Your email address will not be published. Required fields are marked *

one × 5 =