ಶಾಂತಿಯ ಸ್ಥಾಪನೆಯಿಂದ ದೇಶದ ಉನ್ನತಿ ಸಾಧ್ಯ: ಸ್ವಾಮಿ ಧರ್ಮ ಬಂಧುಜಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ದೇಶದಲ್ಲಿ ಶಾಂತಿಯ ವಾತಾವರಣ ಸ್ಥಾಪಿತವಾದರೆ ಉನ್ನತಿ ಸಾಧ್ಯ ಎಂದು ಗುಜರಾತ್‌ನ ರಾಕಥಾ ಶಿಬಿರದ ಮುಖ್ಯ ಅಯೋಜಕ ಸ್ವಾಮಿ ಧರ್ಮ ಬಂಧುಜಿ ಹೇಳಿದರು.

Click Here

Call us

Call us

ಅವರು ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಕಾಮರ್ಸ್ ಪ್ರೊಫೆ?ನಲ್ ವಿಭಾಗದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ಚಾಣಕ್ಯ-2021ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.

Click here

Click Here

Call us

Visit Now

ಭಾರತದಲ್ಲಿ ಬೌತಿಕ ಸುರಕ್ಷತೆ ಹಾಗೂ ಆರ್ಥಿಕ ಸುರಕ್ಷತೆಯಿಂದ ಶಾಂತಿ ಸ್ಥಾಪಿಸಲು ಸಾಧ್ಯ. ಆರ್ಥಿಕವಾಗಿ ಭಾರತದಲ್ಲಿ ಯಾವುದೇ ಆಪತ್ತು ಬಂದೊದಗಿದರೆ ಆರ್ಥಿಕ ಕ್ಷೇತ್ರಕ್ಕೆ ಹೆಚ್ಚಿನ ನವುಂಟಾಗುತ್ತದೆ. ದೇಶದ ಉನ್ನತಿಯಗಬೇಕಾದರೆ ಸುರಕ್ಷತೆ ಮತ್ತು ಆರ್ಥಿಕ ಭದ್ರತೆಗೆ ಪ್ರಾಧಾನ್ಯತೆ ನೀಡಬೇಕು. ಪ್ರಸ್ತುತ ಜಾಗತಿಕವಾಗಿ ನಸಿಂಗ್, ಪ್ಲಂಬಿಂಗ್ ಹಾಗೂ ಕಾಪೆಂಟರ್ ವೃತ್ತಿಗಳಿಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಸ್ಟೀಲ್, ಟೆಕ್ಸ್ ಟೈಲ್ಸ್, ರಿಯಲ್ ಎಸ್ಟೇಟ್ ಮತ್ತು ವಜ್ರದ ವ್ಯಾಪರಗಳು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದೆ. ಜಾಗತೀಕರಣ ಖಾಸಗೀಕರಣ, ನಗರೀಕರಣ ಹಾಗೂ ಉದಾರೀಕರಣದೊಂದಿಗೆ ಭವಿ?ದಲ್ಲಿ ಒದಗಿ ಬರಬಹುದಾದ ಸೈಬರ್ ದಾಳಿ, ಜೈವಿಕ ದಾಳಿ ಅಲ್ಲದೇ ಸೈದ್ದಾಂತಿಕ ದಾಳಿಯನ್ನು ಎದುರಿಸಬೇಕಾದ ಮನೋಸ್ಥೆರ್ಯದೊಂದಿಗೆ ಆಧ್ಯಾತ್ಮದ ಚಿಂತನೆಗಳು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಜನರೊಂದಿಗೆ ಬೆರೆಯುವ ಮತ್ತು ಸಂವಹನಿಸುವ ಕೌಶಲ್ಯಗಳು ಪಠ್ಯದಿಂದ ಪಡೆಯಲು ಸಾಧ್ಯವಿಲ್ಲ. ನಮ್ಮ ಮಿತಿಯಿಂದ ಹೊರಬಂದಾಗ ಮಾತ್ರ ಇನ್ನೊಬ್ಬರೊಂದಿಗೆ ಬೆರೆಯಬಹುದು. ವ್ಯಾಪಾರದಲ್ಲಿ ಹಣದ ಲಾಭಕ್ಕಿಂತ ಮೌಲ್ಯಗಳಿಗೆ ಹೆಚ್ಚಿನ ಬೆಲೆ ನೀಡಬೇಕು. ಯಾವುದೇ ವಿಚಾರಗಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡದೆ ಒಳಹೊರಗಳನ್ನು ತಿಳಿದುಕೊಳ್ಳಬೇಕು ಜೀವನದಲ್ಲಿ ಸ್ಪ? ಗುರಿಯೊಂದಿಗೆ ಮುಂದುವರಿಯಬೇಕು ಎಂದರು.

ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಒಗ್ಗೂಡಿ ಕೆಲಸ ಮಾಡುವುದರಿಂದ ಸಹಕಾರ ಮನೋಭಾವ ಬೆಳೆಯುತ್ತದೆ. ಒಂದು ದೇಶದ ಬೆಳವಣಿಗೆಯಲ್ಲಿ ಪ್ರತಿಯೊಂದು ಜೀವಿಯ ಕೊಡುಗೆಯಿದೆ. ವಿದ್ಯಾರ್ಥಿಗಳಿಗೆ ತಾವು ಮಾಡುವ ಕಾರ್ಯಗಳನ್ನು ಇತರರಿಗೂ ತಲುಪಿಸುವ ಉದ್ದೇಶವಿರಬೇಕು ಎಂದರು.

Call us

ಸಮಾರಂಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಭಾಗ ಸಂಯೋಜಕ ಅಶೋಕ್ ಕೆ ಜಿ, ಕಾರ್ಯಕ್ರಮ ಸಂಯೋಜಕಿ ಅಪರ್ಣಾ, ಉಪನ್ಯಾಸಕ ಅನಂತಶಯನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರೇರಣಾ ಎಸ್ ಹೆಬ್ಬಾರ್, ವಿದ್ಯಾರ್ಥಿ ಈಶ್ವರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

10 − ten =