ಶಿಕ್ಷಕರಿಂದ ಪ್ರಜ್ಞಾವಂತ ನಾಗರಿಕರ ಸೃಷ್ಟಿಸುವ ಕಾರ್ಯ: ಎ. ವಿ. ನಾವಡ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಕರು ಇತಿಹಾಸ ಗುರುತಿಸುವ ಗುರು ಆಗಬೇಕೇ ವಿನಃ ಯಾವತ್ತು ಲಘು ಆಗಬಾರದು. ಶಿಕ್ಷಕ ದಾಖಲೆಯಲ್ಲಿ ನಿವೃತ್ತರಾದರೂ ಅವರು ಹವ್ಯಾಸಿಯಾಗಿ ಶಿಕ್ಷಕನಾಗಿಯೇ ಉಳಿದು ಸಮಾಜ ತಿದ್ದುವ ಕೆಲಸ ಮಾಡಬೇಕು. ಕನ್ನಡ, ಸಂಸ್ಕೃತಿ, ಭಾಷೆ ಹೇಳಿಕೊಡುವ ಜೊತೆ ಪ್ರಜ್ಞಾವಂತ ನಾಗರಿಕರ ಸೃಷ್ಟಿಸುವ ಕೆಲಸ ಶಿಕ್ಷಕರಿಂದ ಆಗುತ್ತಿದೆ ಎಂದು ಜಾನಪದ ವಿದ್ವಾಂಸ ಎ. ವಿ. ನಾವಡ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ತಾಲೂಕು ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಇಂಗ್ಲಿಷ್ ಭಾಷೆಯಾಗಿ ಒಂದನೇ ತಗತಿಯಿಂದ ಕಲಿಸಿ, ಇಂಗ್ಲೀಷ್ ಜೊತೆ ಕನ್ನಡ ಕಲಿಸುವದಲ್ಲದೆ, ನಮ್ಮ ಮಣ್ಣಿನ ಭಾಷೆ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಕವಿ ಸಾಹಿತಿಗಳ ಪರಿಚಯಿಸುವ ಕೆಲಸ ಮಾಡಬೇಕಿತ್ತು. ಕನ್ನಡ ಕೇವಲ ಭಾಷೆಯಲ್ಲ ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬೀಜಾಡಿ ಜಿಪಂ ಸದಸ್ಯ ಶ್ರೀಲತಾ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಕೋಟೇಶ್ವರ ಜಿಪಂ ಸದಸ್ಯ ಲಕ್ಷ್ಮೀ ಮಂಜು ಬಿಲ್ಲವ, ಕುಂಭಾಶಿ ತಾಪಂ ಸದಸ್ಯೆ ಜ್ಯೋತಿ ಪುತ್ರನ್, ಕಾವ್ರಾಡಿ ತಾಪಂ ಸದಸ್ಯ ಅಂಬಿಕಾ ಕಾವ್ರಾಡಿ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಪಂ ಪ್ರಭಾರ ಇಒ ಡಾ.ನಾಗಭೂಚಣ ಉಡುಪ, ತಾಲೂಕು ಬಂಟರ ಸಂಘ ಸಂಚಾಲಕ ಸಂಪಿಗೇಡಿ ಸಂಜೀವ ಶೆಟ್ಟಿ, ಟೀಚರ‍್ಸ್ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕಿಶನ್‌ರಾಜ್ ಹೆಗ್ಡೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೀರಣ್ಣ ಶೆಟ್ಟಿ, ವಿವಿಧ ಶಿಕ್ಷಕರ ಸಂಘ ಪದಾಧಿಕಾರಿಗಳಾದ ಮಲ್ಯಾಡಿ ಸಖಾರಾಮ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಜ್ಯೋತಿ, ಪ್ರಭಾಕರ ಶೆಟ್ಟಿ, ನಾರಾಯಣ ಶೆಟ್ಟಿ ಚೆನ್ನಯ್ಯ, ತಾಲೂಕು ಸಂಪನ್ಮೂಲ ಕೇಂದ್ರ ಸಂಪನ್ಮೂಲ ವ್ಯಕ್ತಿ ಸದಾನಂದ ಬೈಂದೂರು, ಅಕ್ಷರ ದಾಸೋಹ ಅಧಿಕಾರಿ ಅರುಣ್ ಕುಮಾರ್ ಶೆಟ್ಟಿ ಇದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು, ರಾಷ್ಟ್ರ, ಜಿಲ್ಲಾ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಸಾಧಕ ಶಿಕ್ಷಕರ ಸನ್ಮಾನಿಸಲಾಯಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸ್ವಾಗತಿಸಿದರು. ಸುಬ್ಬಣ್ಣ ಕೋಣಿ ಜನಪದ ವಿದ್ವಾಂಸ ಎ.ವಿ.ನಾವಡರ ಪರಿಚಯ ಮಾಡಿದರು. ಶಿಕ್ಷಕರಾದ ವೇಣು ಗೋಪಾಲ ಹೆಗ್ಡೆ ಹಾಗೂ ಸಂತೋಷ್ ಶೆಟ್ಟಿ ನಿರೂಪಿಸಿದರು.

► ಅಧ್ಯಾಪನವೇ ಶ್ರೇಷ್ಠ ವೃತ್ತಿ: ಶಿಕ್ಷಕರ ದಿನಾಚರಣೆಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ – https://kundapraa.com/?p=32969 .

Leave a Reply

Your email address will not be published. Required fields are marked *

eighteen − 12 =