ಶಿಕ್ಷಕರ ದಿನಾಚರಣೆ: ಬದುಕಿನ ದಾರಿ ತೋರಿದ ಗುರುಗಳನ್ನು ನೆನೆಯುತ…

Call us

Call us

ಗುರು ಬ್ರಹ್ಮ ಗುರು ವಿಷ್ಣು ಗುರುದೆವೋ ಮಹೇಶ್ವರ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈಃ ಶ್ರೀ ಗುರವೇ ನಮಃ

Call us

Call us

ಎದೆಯ ಹಣತೆಯಲ್ಲಿ ಅಕ್ಕರದ ದೀಪ ಹೊತ್ತಿಸಿ ನಮ್ಮಂಥ ಅಗಣಿತ ಮಂದಿಯ ಬಾಳಿಗೆ ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ, ಗುರುಸಮಾನರಿಗೆ ಈ ದಿನದ ಶುಭಾಶಯಗಳು

ಶಿಕ್ಷಣವೆನ್ನುವುದು ಸಾರ್ವತ್ರಿಕ ಹಾಗೂ ನಿರಂತರ ಪ್ರಕ್ರಿಯೆ ಆಗಿದೆ. ಇದರಲ್ಲಿ ಪ್ರತಿ ಶಿಕ್ಷಕರ ಪಾತ್ರವೂ ಅತಿ ಮಹತ್ತ್ವದ್ದು. ಆ ಕಾರಣದಿಂದಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ 5 ನ್ನು ವಿಶ್ವ ಶಿಕ್ಷಕರ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿ ಸೆಪ್ಟೆಂಬರ 5, 1962 ರಿಂದ ಶಿಕ್ಷಕರ ದಿನವನ್ನು ಆಚರಿಸುವ ಪದ್ದತಿ ರೂಢಿಗೆ ಬಂತು. ಮಾಜಿ ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರ ಹುಟ್ಟು ಹಬ್ಬವನ್ನೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.

Call us

ಸರ್ವಪಲ್ಲಿ ರಾಧಾಕೃಷ್ಣನ್ ನೆನಪು:
ಸರ್ವಪಲ್ಲಿ ರಾಧಾಕೃಷ್ಣನ್ ಅವರು 1888 ನೇ ಇಸವಿಯಲ್ಲಿ ಸೆಪ್ಟೆಂಬರ್ 5 ರಂದು ಈಗಿನ ತಮಿಳ್ನಾಡುವಿನ ತಿರುತ್ತಣಿಯಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮ. ವೀರಸ್ವಾಮಿಯವರು ಪುರೋಹಿತರಾಗಿದ್ದರು, ಕಂದಾಯ ಅಧಿಕಾರಿಯೂ ಆಗಿದ್ದರು. ಅವರದು ತೆಲುಗು ವಂಶದ ಬಡ ಬ್ರಾಹ್ಮಣ ವರ್ಗದ ಕುಟುಂಬವಾಗಿತ್ತು. ಅವರ ಬಾಲ್ಯದ ದಿನಗಳು ತಿರುತ್ತ್ಣಿ ಮತ್ತು ತಿರುಪತಿಯಲ್ಲಿ ಕಳೆದವು. ತಿರುತ್ತಿ ಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ 1896 ರಲ್ಲಿ ತಿರುಪತಿಯಲ್ಲಿ ಶಿಕ್ಷ್ನಣ ಮುಂದುವರೆಸಿದರು. ಅವರು ತನ್ನ ವಿದ್ಯಾಭ್ಯಾಸದ ಅವಧಿ ಪೂರ್ತಿ ಸ್ಕಾಲರ್ಶಿಪ್ ಪಡೆದರು. ಮುಂದೆ ಅವರು ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪಧವೀಧರರಾಗುತ್ತಾರೆ. ಮುಂದೆ ಕಾನೂನು ಅಧ್ಯಯನ ಮಾಡಬೇಕೆಂಬ ಅವರ ಇಚ್ಚೆಗೆ ಹಣಕಾಸಿನ ತೊಂದರೆ ಎದುರಾಗುತ್ತದೆ. ತಾಯಿ, ತಂದೆ ಮೂವರು ಸಹೊದರರನ್ನು ಸಾಕಬೇಕಾಗಿತ್ತು. ಅವರ ಸಂಬಳವನ್ನೆ ಖರ್ಚು ಮಾಡಬೇಕಾಗಿತ್ತು. ಬಾಳೆ ಎಲೆ ಕೊಂಡುಕೊಳ್ಳಲು ಹಣವಿಲ್ಲದೆ ನೆಲದಲ್ಲಿ ಊಟ ಮಾಡಿದ ಕಡು ಬಡತನ ಅವರದಾಗಿತ್ತು.

ಕಡು ಬಡತನದಲ್ಲೇ ಅವರು ಶಿಕ್ಷ್ಕಣ ತರಬೇತಿ ಪಡೆಯುತ್ತಾರೆ. ನಂತರ ಮದ್ರಾಸಿನ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆಯುತ್ತಾರೆ ನಂತರ ಅವರನ್ನು ಅನಂತಪುರದ ಕಾಲೇಜಿಗೆ ವರ್ಗಾವಣೆ ಮಾಡಲಾಯಿತು. 1911ರಿಂದ ಏಳು ವರ್ಷಗಳ ಕಾಲ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಅನಂತಪುರ ಕಾಲೇಜಿಗೆ ವರ್ಗಾವಣೆಯಾಗುತ್ತ್ತಾರೆ. 1918 ಜುಲೈನಲ್ಲಿ ರಾಜಮಹೇಂದ್ರಿಯ ಕಾಲೇಜಿನಿಂದ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ನೇಮಿಸಿಕೊಳ್ಳಾಲಾಯಿತು. 1912 ರಲ್ಲಿ ಅವರು ಕೊಲ್ಕತ್ತ ವಿ.ವಿ.ಯ ಮನ:ಶಾಸ್ತ್ರ ಮತ್ತು ತತ್ತ್ವಶಾಸ್ತ್ರಕ್ಕೆ ಸಂಬಂದಿಸಿದ ಐದನೆಯ ಜಾರ್ಜ್ ಪೀಠಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅದೇ ವರ್ಷದಲ್ಲಿ ಭಾರತೀಯ ತತ್ತ್ವಶಾಸ್ತ್ರದ ಕುರಿತಾದ ಅವರ ಮೊದಲನೆಯ ಕೃತಿ ಸಂಪುಟ ಪ್ರಕಟವಾಯಿತು. ಮುಂದೆ 1927ರಲ್ಲಿ ಎರಡನೆಯ ಸಂಪುಟವೂ ಪ್ರಕಟವಾಯಿತು.

ರಾಧಾಕೃಷ್ನನ್ ಅವರು ತನ್ನ ಸಂಬಂಧಿಕರೊಳಗೆ ಓರ್ವಳನ್ನು ವಿವಾಹವಾದರು. ಕುಟುಂಬ ಸಂಪ್ರದಾಯ ಪ್ರಕಾರವೇ ಅವರ ಮದುವೆ ನಡೆಯಿತು. ಐವರು ಹೆಣ್ಣು ಓರ್ವ ಗಂಡು ಮಕ್ಕಳನ್ನು ಪಡೆದರು.

ಅವರು ಆಂಧ್ರ ವಿ.ವಿ.ಯ ಉಪಕುಲಪತಿಯಾಗಿ 1931ರಿಂದ1936ರ ವರೆಗೆ ಸೇವೆ ಸಲ್ಲಿಸಿದರು.1947ರಲ್ಲಿ ಭಾರತ ಸ್ವತಂತ್ರ ಪಡೆದ ಮೇಲೆ ಅವರನ್ನು ಸೋವಿಯೆತ್ ಒಕ್ಕೂಟದ ರಾಯಭಾರಿಯನ್ನಾಗಿ ಭಾರತ ಸರಕಾರ ನೇಮಕ ಮಾಡಿತು.1952ರಲ್ಲಿ ಭಾರತದ ಉಪರಾಷ್ಟ್ರಪತಿಯಾದರು.1962 ರಿಂದ 67 ರವರೆಗೆ ಅವರು ಭಾರತದ ಎರಡನೆಯ ರಾಷ್ಟ್ರಪತಿಯಾಗಿ ಕೆಲಸ ಮಾಡಿದರು. ಅವರು ರಾಷ್ತ್ರಪತಿಯಾಗಿ ನೇಮಕವಾದ ಬಳಿಕ ಅವರ ಹುಟ್ಟು ಹಬ್ಬವನ್ನು ಆಚರಿಸುವಂತೆ ಅವರ ವಿದ್ಯಾರ್ಥಿ ಶಿಷ್ಯಂದಿರುಗಳೆಲ್ಲ ಅವರನ್ನು ಭೇಟಿ ಮಾಡಿ ಕೇಳಿಕೊಂಡಾಗ, ಆ ದಿನವನ್ನು :ಅಧ್ಯಾಪಕರದಿನವನ್ನಗಿ ಆಚರಿಸುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು .ಮುಂದೆ ಅದುವೇ ಖಾಯಂ ಆಯಿತು.

ರಾಷ್ಟ್ರಪತಿಯಾಗಿದ್ದಗಲೇ ರಾಧಾಕೃಷ್ನನ್ ಅವರಿಗೆ ಅನಾರೋಗ್ಯ ಕೈಕೊಟ್ಟಿತು. ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. ಧೀರ್ಘಕಾಲದ ಅನಾರೋಗ್ಯದ ಬಳಿಕ ಅವರು 1975 ಎಪ್ರಿಲ್ 17 ರಂದು ತಮ್ಮ 86ನೆ ವರ್ಷ ವಯಸ್ಸಿನಲ್ಲಿ ನಿಧನರಾದರು. ದೇಶ ಓರ್ವ ಶ್ರೇಷ್ಟ ತತ್ತ್ವಜ್ನಾನಿ ಶಿಕ್ಷಕನನ್ನು ಕಳೆದುಕೊಂಡಿತು. ಅವರ ನೆನಪನ್ನು ನಾವು ಹೀಗೆ ಆಚರಿಸುವುದು ತುಂಬಾ ಅರ್ಥಪೂರ್ಣ ಕೂಡ ಆಗಿದೆ.

Leave a Reply

Your email address will not be published. Required fields are marked *

1 × two =