ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ: ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಮಾಧ್ಯಮ ಶಾಲೆಗಳು ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದು, ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಧಾವಿಸುತ್ತಿರುವ ವೇಗಕ್ಕೆ ಅನುಗುಣವಾಗಿ ಹಲವು ಮಾರ್ಪಾಡುಗಳ ಅಗತ್ಯವಿದೆ. ಹೀಗಿರುವಾಗ ಹಲವು ಇಲ್ಲಗಳ ನಡುವೆ ಸಾರ್ವಜನಿಕರ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿರುವ ಶಿಕ್ಷಕರ ಸೇವೆ ಅನನ್ಯವಾದುದು ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು.

ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಸಾಧಕ ಶಿಕ್ಷಕರಿಗೆ ನೇಶನ್ ಬಿಲ್ಡರ್ ಅವಾರ್ಡನ್ನು ಹಸ್ತಾಂತರಿಸಿ ಮಾತನಾಡಿದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಇಂಜಿನಿಯರ‍್ಸ್ ಸೇತುವೆಗಳನ್ನು ನಿರ್ಮಿಸುತ್ತಾರೆ, ವೈದ್ಯರು ರೋಗಿಯ ಪ್ರಾಣ ಕಾಪಾಡುತ್ತಾರೆ, ಪೋಲಿಸರು ಕಾನೂನು ವ್ಯವಸ್ಥೆಯನ್ನು ರಕ್ಷಿಸುತ್ತಾರೆ ಆದರೆ ಇವರೆಲ್ಲರನ್ನು ರೂಪಿಸುವ ಶಿಕ್ಷಕ ನಿಜವಾದ ರಾಷ್ಟ್ರ ನಿರ್ಮಾತೃರಾಗಿದ್ದಾರೆ ಆದುದರಿಂದ ಅಂತಹ ಸಾಧಕರನ್ನು ಗುರುತಿಸಿ ನೇಶನ್ ಬಿಲ್ಡರ್ ಅವಾರ್ಡ್‌ನ್ನು ನೀಡಲಾಗಿದೆ ಎಂದರು.
ಸಾಧಕ ಶಿಕ್ಷಕರಾದ ಗುಜ್ಜಾಡಿಯ ಸರಕಾರಿ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಎಂ. ಹನುಮಂತ ಬಿಲ್ಲವ, ಬಸ್ರೂರಿನ ನಿವೇದಿತಾ ಪ್ರೌಢಶಾಲೆಯ ಪದವೀಧರ ಶಿಕ್ಷಕ ಸುಬ್ಬಣ್ಣ ಕೋಣಿ, ಜಡ್ಡಿನಗದ್ದೆಯ ಸರಕಾರಿ ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕ ವೈ. ಪಟ್ಟಾಭಿರಾಮ ಭಟ್ ಅವರಿಗೆ ನೇಶನ್ ಬಿಲ್ಡರ್ ಅವಾರ್ಡ್‌ನ್ನು ನೀಡಿ ಪುರಸ್ಕರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್, ಪೂರ್ವಾಧ್ಯಕ್ಷ ಟಿ. ಬಿ. ಶೆಟ್ಟಿ, ಲಿಟ್ರಸಿ ಛೇರ್‌ಮೆನ್ ಆವರ್ಸೆ ಮುತ್ತಯ್ಯ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಪರಮೇಶ್ವರ ಹೆಗಡೆ, ಡಾ. ರಾಜಾರಾಮ ಶೆಟ್ಟಿ, ರಘುರಾಮ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ಜತೆ ಕಾರ್ಯದರ್ಶಿ ಮನೋಜ್ ನಾಯರ್ ವಂದಿಸಿದರು.

Leave a Reply

Your email address will not be published. Required fields are marked *

seventeen + fifteen =