ಶಿಕ್ಷಕ ಮಹಾಬಲ ಕೆ. ಅವರ ‘ಗಾನ ವನಸಿರಿ’ ಕವನ ಸಂಕಲನ ಬಿಡುಗಡೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಕನ್ನಡದಲ್ಲಿ ಮಕ್ಕಳು ಹಾಡಿ ಮುದಗೊಳ್ಳಬಹುದಾದ ಕವನಗಳು ಬೇಕಷ್ಟಿಲ್ಲ. ಶಿಕ್ಷಕರಾಗಿ ಮಕ್ಕಳ ಮನೋಧರ್ಮ ಅರಿತಿರುವ ಕೆ. ಮಹಾಬಲ ಅವರ ಎರಡನೆ ಮಕ್ಕಳ ಕವನ ಸಂಕಲನ ‘ಗಾನ ವನಸಿರಿ’ ಆ ನಿಟ್ಟಿನಲ್ಲಿ ಒಂದು ಉತ್ತಮ ಕೊಡುಗೆ ಎಂದು ನಿವೃತ್ತ ಉಪನ್ಯಾಸಕ ಪಿ. ಶೇಷಪ್ಪಯ್ಯ ಹೇಳಿದರು.

Call us

ಜಿಲ್ಲಾ ಕನ್ನಡ-ತುಳು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭನುವಾರ ನಡೆದ ಸಮಾರಂಭದಲ್ಲಿ ಅವರು ಶಿಕ್ಷಕ ಮಹಾಬಲ ಕೆ. ಅವರ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

Call us

ಕೃತಿ ಪರಿಚಯಿಸಿದ ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ಸಂಕಲನದಲ್ಲಿರುವ 70 ಕವನಗಳು ಸರಳ ಹಾಗೂ ಪ್ರಾಸಬದ್ಧವಾಗಿವೆ. ಮಕ್ಕಳು ಆಡುತ್ತ, ಕುಣಿಯುತ್ತ ಹಾಡಿ ಅವುಗಳ ಆಶಯ ಮತ್ತು ನೀತಿಯನ್ನು ಅರಿತು ಅಳವಡಿಸಿಕೊಳ್ಳಬಹುದಾಗಿದೆ. ಕವನಗಳು ಪ್ರಮುಖವಾಗಿ ಪ್ರಕೃತಿ, ಪ್ರಾಣಿ, ದೇಶ, ರೈತ, ಆದರ್ಶಕ್ತಿಗಳ ಕುರಿತಾಗಿವೆ. ವಿಷಯಗಳು ಹೊಸ ದೃಷ್ಟಿಕೋನದಿಂದ ಅಭಿವ್ಯಕ್ತವಾಗಿವೆ. ಮಕ್ಕಳ ಬಾಲ್ಯವನ್ನು ಮರುರೂಪಿಸುವ ಬಾಲಲೀಲೆ, ಅಜ್ಜಿಯ ಮನೆ, ಆಡೋಣ ಆಟ, ಇಂದೇ ಶಾಲೆಗೆ ಬಾರಮ್ಮ, ಜೋಪಾನ ಮಗುವೆ, ನನ ಕಂದ, ನಲಿಯೋಣ, ನೀರಾಟ, ಅಮ್ಮ, ಅವ್ವನ ತುತ್ತು, ರಜೆಯ ಮಜ ಇತ್ಯಾದಿ ಅಪ್ಯಾಯಮಾನವಾಗಿವೆ ಎಂದರು.

ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಅಧ್ಯಕ್ಷತೆ ವಹಿಸಿದ್ದರು. ಶ್ರೀವರ್ಷಾ ಪ್ರಾರ್ಥನೆ ಹಾಡಿದರು. ಮಂಜುನಾಥ ಮಧ್ಯಸ್ಥ ಸ್ವಾಗತಿಸಿದರು. ಕವಿ ಮಹಾಬಲಸ್ತಾವಿಕವಾಗ ಮಾತನಾಡಿದರು. ಗುಜ್ಜಾಡಿ ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ಕವಿಪರಿಚಯ ಮಾಡಿದರು. ಕವಿ ಮೊಗೇರಿ ಶೇಖರ ದೇವಾಡಿಗ ವಂದಿಸಿದರು. ಮರವಂತೆ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ನಿರೂಪಿಸಿದರು. ಕನ್ನಡ ತುಳು ಸಾಹಿತ್ಯ ವೇದಿಕೆಯ ಮುಖ್ಯ ನಿರ್ವಾಹಕಿ ಶೋಭಾ ಹರಿಪ್ರಸಾದ್, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಉಬ್ಜೇರಿ, ನಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ, ಬೈಂದೂರು ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಶುಭ ಹಾರೈಸಿದರು.. ಸಂಗೀತಗಾರ ಶರತ್ ನಾಡ ಮತ್ತು ಅವರ ವಿದ್ಯಾರ್ಥಿಗಳು ಸಂಕಲನದ ಆಯ್ದ ಕವನಗಳನ್ನು ಹಾಡಿದರು.

Leave a Reply

Your email address will not be published. Required fields are marked *

seven + 4 =