ಶಿಕ್ಷಣದಿಂದ ವಿಶ್ವ ಮಾನವ ಪಟ್ಟಕ್ಕೇರಲು ಸಾಧ್ಯ: ವಿಕಾಸ್ ಹೆಗ್ಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತೀ ಮಗುವೂ ವಿಶ್ವ ಮಾನವನಾಗಿ ಜಗತ್ತಿನ ಬೆಳಕು ಕಾಣುತ್ತದೆ. ಪರಿಸರ ಒಡನಾಟದಿಂದ ಸಹಜವಾಗಿಯೇ ಬೆಳೆಯುತ್ತಾ ಅಲ್ಪ ಮಾನವರಾಗಿ ಪರಿರ್ವತನೆ ಆಗುತ್ತಾರೆ. ಆದರೆ ಉತ್ತಮ ಶಿಕ್ಷಣದ ಪಡೆಯುವ ಮೂಲಕ ಕುವೆಂಪು ಏರಿದ ವಿಶ್ವ ಮಾನವತೆಯ ಕಡೆಗೆ ಸಾಗುತ್ತಾನೆ ಎಂದು ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಮಿನಿ ವಿಧಾನ ಸೌಧ, ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ಶಾಂತಿ, ಸೌಹಾದತೆ ಮರೆಯಾಗುತ್ತಿದ್ದು, ವಿಶ್ವ ಮಾನವ ಶ್ರೇಷ್ಠತೆ ಅರಿವು ಕಡಿಮೆ ಆಗುತ್ತಿದೆ. ಸಹೋದರತೆ, ಸಹಬಾಳ್ವೆ, ಸಂಯಮ, ಕೂಡಿ ಬಾಳಿವ ಕಲ್ಪನೆ ವಿಶ ಮಾನವ ಸ್ಥಾನದ ಮೆಟ್ಟಿಲಾಗಿದ್ದು, ಕುವೆಂಪು ಸಾಗಿಬಂದ ದಾರಿಯ ಅನುಸರಿಸುವುದರ ಮೂಲಕ ಸಾಮಾನ್ಯ ಕೂಡಾ ವಿಶ್ವಮಾನವ ಪಟ್ಟಕ್ಕೆ ಏರಲು ಸಾಧ್ಯೆ ಎಂದು ಹೇಳಿದರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಜಿ.ಎಂ.ಬೋರ್ಕರ್, ಉಪತಹಸೀಲ್ದಾರ್ ನವೀನ್, ಬಿಸಿಎಂ ಹಾಸ್ಟೆಲ್ ವಿಸ್ತರಣಾಧಿಕಾರಿ ಜಿ.ಬಿ.ಮಾದರ್ ಇದ್ದರು.  ಕಂದಾಯ ಇಲಾಖಾ ಅಧಿಕಾರಿ ನರಸಿಂಹ ಕಾಮತ್ ಸ್ವಾಗತಿಸಿ, ನಿರೂಪಿಸಿದರು. ಚುನಾವಣಾ ಅಧಿಕಾರಿ ರವಿ ವಂದಿಸಿದರು.

Leave a Reply

Your email address will not be published. Required fields are marked *

20 − five =