ಶಿಕ್ಷಣದೊಂದಿಗೆ ಕಲೆಯಲ್ಲಿ ನೈಪುಣ್ಯತೆ ಸಾಧಿಸಿದರೆ ವ್ಯಕ್ತಿತ್ವ ಪರಿಪೂರ್ಣ: ಎಸ್. ಜನಾರ್ದನ ಮರವಂತೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು:
ಶಿಕ್ಷಣ ವ್ಯಕ್ತಿಯ ಕೊರತೆಯ ಅರ್ಧವನ್ನು ತುಂಬಿಸಿದರೆ, ಉಳಿದರ್ಧವನ್ನು ಕಲೆಗಳು ಭರ್ತಿ ಮಾಡುತ್ತವೆ. ಒಬ್ಬರು ಪೂರ್ಣರೆನಿಸಬೇಕಾದರೆ ಶಿಕ್ಷಣದ ಜತೆಗೆ ಯಾವುದಾರೊಂದ ಕಲೆಯಲ್ಲಿ ನೈಪುಣ್ಯ ಸಾಧಿಸಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್. . ಜನಾರ್ದನ ಮರವಂತೆ ಹೇಳಿದರು.

Click here

Click Here

Call us

Call us

Visit Now

Call us

Call us

ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ವಿವಿಧ ಕಲೆಗಳ ಕಲಿಕೆಗೆ ವೇದಿಕೆ ಒದಗಿಸುವ ಕಲಾವರಣ ಉದ್ಘಾಟಿಸಿ ಅವರು ಮಾತನಾಡಿದರು. ಕಲಾಪ್ರದರ್ಶನದ ವೇಳೆ ಅದಕ್ಕೆ ಶ್ರೋತೃ ಅಥವಾ ಪ್ರೇಕ್ಷಕರ ಅಪನಂಬಿಕೆಯನ್ನು ನಶಿಸುವಂತೆ ಮಾಡುವ ಶಕ್ತಿ ಇದೆ. ಆ ಮೂಲಕ ಅವರು ಅದರಲ್ಲಿ ತನ್ಮಯರಾಗುತ್ತಾರೆ. ಆಗ ಅವರು ಭಾವಪ್ರಪಂಚಕ್ಕೆ ಜಾರುತ್ತಾರೆ. ಅಂತಹ ಜಾರುವಿಕೆ ಅವರನ್ನು ಸಹೃದಯಿಗಳಾಗಿ ಮಾಡುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ಶಿರೂರ್ಕರ್ ಶಾಲೆಯಲ್ಲಿ 9 ಮತ್ತು 10ನೆ ತರಗತಿ ಆರಂಭಿಸಲು ಅನುಮತಿ ದೊರಕಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಶಿಕ್ಷಕರು ಶಾಲೆಯ ಗುಣಮಟ್ಟ ಎತ್ತರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೌಲಾನಾ ದಸ್ತಗೀರ್ ಶಾಲೆಗೆ ಕಂಪ್ಯೂಟರ್ ಕೊಡಿಸುವ ಭರವೆಸೆಯಿತ್ತರು.

ಶಿಕ್ಷಕಿ ಶ್ರದ್ಧಾ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧಿಸುವುದು ಸಂಸ್ಥೆಯ ಗುರಿ. ಅದಕ್ಕಾಗಿ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳ ಆಸಕ್ತಿಯ ಕಲೆಯ ಕಲಿಕೆಗೆ ಅವಕಾಶ ಕಲ್ಪಿಸುವುದು ಕಲಾವರಣದ ಉದ್ದೇಶ ಎಂದರು. ಹೇಮಾ ಮತ್ತು ಅನಿತಾ ಅತಿಥಿಗಳನ್ನು ಪರಿಚಯಿಸಿದರು. ಗೀತಾ ವಂದಿಸಿದರು. ಸುರಕ್ಷಾ ನಿರೂಪಿಸಿದರು. ಆಡಳಿತ ಮಂಡಳಿ ನಿರ್ದೇಶಕ ಶಂಕರ ಮೇಸ್ತ, ಅಣ್ಣಪ್ಪ, ಯೋಗ ಶಿಕ್ಷಕ ಸಂಜೀವ, ನೃತ್ಯ ಶಿಕ್ಷಕಿ ಮಾಯಾ ಪ್ರಭು, ಕಷಗಾನ ಶಿಕ್ಷಕ ಶ್ರೀಧರ ಗಾಣಿಗ, ಕರಾಟೆ ಶಿಕ್ಷಕ ಚಂದ್ರ ನಾಯ್ಕ್, ಶ್ಯಾಮ್ ಅವಭೃತ್, ಶೀಧರ ಅವಭೃತ್ ಇದ್ದರು.

Call us

Leave a Reply

Your email address will not be published. Required fields are marked *

8 − 6 =