ಶಿಕ್ಷಣದ ಜತೆ ಉದ್ಯೋಗ ಸಿದ್ಧತೆ ನಡೆಸಿ: ಅಬ್ದುಲ್ ರವೂಫ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಲಿಕೆ ಹಂತದಲ್ಲೇ ಉದ್ಯೋಗ ಸಂಬಂಧಿ ಪೂರ್ವ ಸಿದ್ಧತೆ ನಡೆಸಿದರೆ, ಮುಂದೆ ಯಶಸ್ಸು ಪಡೆಯಲು ಸಾಧ್ಯ ಎಂದು ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಹೇಳಿದರು.

ನಮ್ಮ ನಾಡ ಒಕ್ಕೂಟದ ಬೈಂದೂರು ಘಟಕ ಹಾಗೂ ಸ್ಥಳೀಯ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ಕಾರಿ ಉದ್ಯೋಗ ಮಾಹಿತಿ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಹಂಝತ್ ಹೆಜಮಾಡಿ, ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಜಾಗೃತಿ ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.

ಒಕ್ಕೂಟದ ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್, ಬೈಂದೂರು ಘಟಕದ ಉಪಾಧ್ಯಕ್ಷ ಮಾಮ್ಡು ಇಬ್ರಾಹೀಂ ಮಾಸ್ಟರ್, ಸಲಹೆಗಾರ ಉಸ್ಮಾನ್ ಜಾಫರ್, ಬೈಂದೂರು ಜುಮಾ ಮಸೀದಿಯ ಖತೀಬ್ ಫೈಝುಲ್ ಬಾರಿ ಮೌಲಾನ, ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಇದ್ದರು. ನೂರುಲ್ ಇಸ್ಲಾಂ ಸಾಹಬ್ ಕಾರ್ಯಕ್ರಮ ನಿರೂಪಿಸಿದರು. ಬೈಂದೂರು ಘಟಕದ ಕಾರ್ಯದರ್ಶಿಗಳಾದ ಅಲ್ತಾಫ್ ಮುಖ್ರಿ ಮತ್ತು ಕಾವಾ ಸಯೀದ್ ಸಹಕರಿಸಿದರು. ಕಾರ್ಯಕ್ರಮಕ್ಕೆ ಶಿರೂರಿನ ಸೋಚ್ ಚಾರಿಟಬಲ್ ಟ್ರಸ್ಟ್, ನಾಖುದಾ ವೆಲ್ಫೇರ್ ಅಸೋಸಿಯೇಷನ್ ಹಾಗೂ ಹಳಗೇರಿ ಓವರ್ಸೀಸ್ ಕಮಿಟಿ ಸಹಯೋಗ ನೀಡಿದ್ದವು.

ಅಬ್ದುಲ್ ರವೂಫ್, ಬೈಂದೂರು ಘಟಕದ ಉಪಾಧ್ಯಕ್ಷ ಸಯ್ಯದ್ ಅಜ್ಮಲ್ ಸಾಹಬ್, ಅರಣ್ಯ ಸಿಬ್ಬಂದಿ ಅಬ್ಬಾಸ್ ಮುಖ್ರಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

fourteen + eighteen =