ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಸಮಾಜದ ಜವಾಬ್ದಾರಿಯುತ ವ್ಯಕ್ತಿಯನ್ನಾಗಿಸುತ್ತದೆ: ಡಾ. ಹೆಚ್ ವಿನೋದ ಭಟ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಫುರ : ವಿದ್ಯಾರ್ಥಿಗಳ ಆಸಕ್ತಿ ಮತ್ತು ವಿದ್ಯೆಗೆ ಪೂರಕವಾಗಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಅವಕಾಶಗಳನ್ನು ಭಂಡಾರ್ಕಾರ್ಸ್ ಕಾಲೇಜು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್ ವಿನೋದ ಭಟ್ ಹೇಳಿದರು.

Call us

Call us

ಅವರು ಇಲ್ಲಿನ ಭಂಡಾರ್ಕಾರ್ಸ್‌ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಂಡಾರ್ಕಾರ್ಸ್ ಕಾಲೇಜುಅತ್ತ್ಯುತ್ತಮ ಸಂಸ್ಥೆಯಾಗಿದೆ. ಇಲ್ಲಿನಸಕಲ ಸೌಲಭ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲಕರವಾಗಿದೆ. ಈ ಪರಿಸರ ಸ್ನೇಹಿ ಸಂಸ್ಥೆಯು ವಿವಿಧ ಪಠ್ಯೇತರತರಬೇತಿ, ಮೌಲ್ಯಯುತಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಮಾಜದಒಬ್ಬಜವಾಬ್ದಾರಿಯುತ ವ್ಯಕ್ತಿಯನ್ನಾಗಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಈ ಕಾಲೇಜಿನ ಬೆಳವಣಿಗೆಯ ಹಿನ್ನೆಲೆಯನ್ನು ಗಮನಿಸಿದಾಗ ಕಾಲೇಜಿನ ಆಡಳಿತ ಮಂಡಳಿ, ಪಾಲಕರು, ವಿದ್ಯಾರ್ಥಿಗಳು ಮತ್ತು ಸಮಾಜದ ಎಷ್ಟೋ ಜನರ ಪರಿಶ್ರಮ, ಬೆಂಬಲದೊಂದಿಗೆದೊಡ್ಡ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದುಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶಾಂತಾರಾಮ ಎ. ಭಂಡಾರ್ಕಾರ್ ಮಾತನಾಡಿಸಂಸ್ಥೆಯು ವಿವಿಧ ಸೌಲಭ್ಯUಳನ್ನು ಹೊಂದಿದೆ. ಜೊತೆಗೆ ವಿದ್ಯಾರ್ಥಿಗಳು ಸಾಧನೆಯನ್ನು ಗಮನಿಸಿದಾಗ ಸಂಸ್ಥೆಯು ವಿಭಿನ್ನವಾಗಿಕಾಣುತ್ತದೆಎಂದುತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

Call us

Call us

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದಡಾ.ಹೆಚ್.ಶಾಂತಾರಾಮ್ ಮಾತನಾಡಿ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಬೇಕಾಗುತ್ತದೆ ಹಾಗಿದ್ದಾಗ ಒಳ್ಳೆಯ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಎಂದು ಹೇಳಿದರು.

ಈ ಸಂದರ್ಭದಲ್ಲಿಕಾಲೇಜಿನಿಂದ ಸೇವಾ ನಿವೃತ್ತಿಯನ್ನು ಪಡೆದಕಚೇರಿ ನಿರ್ವಾಹಕರಾದ ಶೋಭಾ, ಕಚೇರಿ ಸಹಾಯಕರಾದಅಶೋಕ್ ಶೇರಿಗಾರ್ ಮತ್ತುರ್ಯಾಂಕ್ ವಿಜೇತರಾದರಕ್ಷಿತಾ (ಬಿ.ಸಿ.ಎ ಪ್ರಥಮರ್ಯಾಂಕ್) ಅಮೃತ(ಎಂಟನೆರ್ಯಾಂಕ್, ಬಿ.ಸಿ.ಎ) ಮತ್ತುಅಮೃತ ( ಒಂಬತ್ತನೇರ್ಯಾಂಕ್ ಬಿ.ಎ) ಇವರಿಗೂ ಮತ್ತು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತರ ಪರವಾಗಿ ಶೋಭಾಅವರು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದಕೆ.ದೇವದಾಸಕಾಮತ್, ಸದಾನಂದಛಾತ್ರ, ರಾಜೇಂದರ್ ತೋಳಾರ್, ಪ್ರಜ್ನೇಶ್ ಪ್ರಭು, ಕೆ.ಶಾಂತಾರಾಮ ಪ್ರಭು ಮತ್ತು ಪ್ರಕಾಶ್ ಟಿ.ಸೋನ್ಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶಾಂತಾರಾಮ ಎ. ಭಂಡಾರ್ಕಾರ್ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ಪ್ರಸ್ತುತಪಡಿಸಿದರು.ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮಕ್ಕೆ ಮಹನೀಯರು ಕಳುಹಿಸಿದ ಶುಭಾಶಯ ಪತ್ರವನ್ನುಉಪನ್ಯಾಸಕರಾಮಚಂದ್ರಆಚಾರಿಓದಿದರು. ಉಪನ್ಯಾಸಕಿ ವಿಜಯಲಕ್ಷ್ಮಿ ಶೆಟ್ಟಿ ಸಾಧಕ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಗ್ರಂಥಾಲಯದ ಶಾಂತಿಇವರು ನಿವೃತ್ತರಕುರಿತು ಪರಿಚಯಿಸಿದರು. ಉಪನ್ಯಾಸಕಿ ದಿವ್ಯಾ ಮೆರಿಟಾ sರ್ನಾಂಡಿಸ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಅರುಣ್‌ಎ.ಎಸ್‌ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಹರ್ಷಿತಾ ವಂದಿಸಿದರು.

Leave a Reply

Your email address will not be published. Required fields are marked *

fifteen − 4 =