ಶಿರೂರು ಅಸೋಶಿಯೇಶನ್: ಉಚಿತ ವೈದ್ಯಕೀಯ ಶಿಬಿರ

Call us

Call us

Call us

Call us

ಬೈಂದೂರು: ಶಿರೂರು ಅಸೋಶಿಯೇಶನ್ ಇವರ ಸಹಭಾಗಿತ್ವದಲ್ಲಿ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ ವೈದ್ಯಕೀಯ ತಂಡದವರಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

Call us

Click Here

Click here

Click Here

Call us

Visit Now

Click here

ಕೆ.ಎಂ.ಸಿ.ಯ ಕಾರ್ಯನಿರ್ವಾಹಣಾ ಅಧಿಕಾರಿ ಹರ್ಬರ್ಟ ಮೆರಿಯೋ ಪಿರಿಯರ್ ರೋಗಿಗಳ ಹೆಸರು ನೊಂದಣಿ ಮಾಡುವುದರ ಮೂಲಕ ಶಿಬಿರ ಉದ್ಘಾಟಿಸಿದರು. ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ಕಣ್ಣಿನ ತಪಾಸಣೆ, ಮಕ್ಕಳ ವಿಭಾಗ, ಎಲುಬು, ಸ್ತ್ರೀರೋಗ ಹಾಗೂ ದ್ವನಿ, ಶ್ರವಣ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಸಾಮಾನ್ಯ ರೋಗ ತಪಾಸಣಾ ವಿಭಾಗ ಸೇರಿ ಒಟ್ಟಿಗೆ ೫೬೮ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಲಾಯಿತು. ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ ನೀಡಲಾಯಿತು. ಶಿರೂರು ಅಸೋಸಿಯೇಶನ್ ಸದಸ್ಯ ಸೈಯ್ಯದ್ ಮಹ್ಮದ್ ಷಾ ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿರೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ, ಉಪಪ್ರಾಂಶುಪಾಲ, ಸಿಬ್ಬಂದಿವರ್ಗ ಹಾಗೂ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದ ವಿಧ್ಯಾರ್ಥಿಗಳ ಸಹಕಾರವನ್ನು ಶ್ಲಾಘಿಸಲಾಯಿತು. ಶಿರೂರು ಅಸೋಸಿಯೇಶನ್ ಪರವಾಗಿ ಮಂಜುನಾಥ ಬಿಲ್ಲವ ಕಾರ‍್ಯಕ್ರಮದ ಉಸ್ತುವಾರಿ ವಹಿಸಿದ್ದರು. ಕಾರ‍್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರನ್ನು ಶಿರೂರು ಅಸೋಸಿಯೇಶನ್ ಅಧ್ಯಕ್ಷ ಸೈಯದ್ ಇಬ್ರಾಹಿಂ ಹಾಗೂ ಕಾರ್ಯದರ್ಶಿ ಸಾಧನ್ ದಾಸ್, ಕೋಶಾಧಿಕಾರಿ ಕೆ.ಬಿ ಪೈಯಾಜ್ ಅಹ್ಮದ್ ಮತ್ತು ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

nineteen − eight =