ಶಿರೂರು: ಅ.30ರಂದು ಹೆದ್ದಾರಿ ಹೋರಾಟ ಸಮಿತಿಯಿಂದ ಟೋಲ್ ಚಲೋ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ಮುಂದಾಳತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸ್ಥಳೀಯರ ಬೇಡಿಕೆಗಳನ್ನು ಆಗ್ರಹಿಸಿ ಟೋಲ್ ಚಲೋ ಅಭಿಯಾನ ಅಕ್ಟೋಬರ್ 30ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.

ಈಗಾಗಲೇ ಹೆದ್ದಾರಿ ಹೋರಾಟ ಸಮಿತಿ ಮುಂದಾಳತ್ವದಲ್ಲಿ ಸರ್ವಿಸ್ ರಸ್ತೆ ಬೇಡಿಕೆ ಸಲ್ಲಿಸಿದ್ದು ಬೇಡಿಕೆಗೆ ಸ್ಪಂದಿಸಿದ ಸಂಸದರು ಹೆದ್ದಾರಿ ವಲಯ ಕಛೇರಿ ಅಧಿಕಾರಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸಿದ್ದರು. ಆದರೆ ಹೆದ್ದಾರಿ ಅಧಿಕಾರಿಗಳಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಮಾತ್ರವಲ್ಲ ಸ್ಥಳೀಯ ಪಂಚಾಯತ್ ಸೇರಿದಂತೆ ಪ್ರಮುಖ ಲಿಂಕ್ ರಸ್ತೆಗಳನ್ನು ಕಡಿತಗೊಳಿಸಿದ್ದು ಇದುವರೆಗೆ ದುರಸ್ತಿಗೊಳಿಸಿಲ್ಲ. ಇದರ ಜೊತೆಗೆ ಕಂಪೆನಿ ಟೋಲ್‌ಗೇಟ್ ಆರಂಭಿಸಲು ಸಿದ್ದತೆ ನಡೆಸುತ್ತಿದೆ. ಸ್ಥಳೀಯ ೧೦ ಕಿ.ಮೀ ವ್ಯಾಪ್ತಿಯ ಒಳಗಿನವರಿಗೆ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಟೋಲ್ ಚಲೋ ಅಭಿಯಾನ ಅಕ್ಟೋಬರ್ 20ರಂದು ಬೆಳಿಗ್ಗೆ 10 ಗಂಟೆಗೆ ಶಿರೂರು ಟೋಲ್ ಗೇಟ್ ಬಳಿ ನಡೆಯಲಿದೆ.

ಸ್ಥಳೀಯ ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

5 + 18 =