ಶಿರೂರು: ಉಚಿತ ಯೋಗ ಶಿಬಿರ ಉದ್ಘಾಟನೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆ.ಸಿ.ಐ ಶಿರೂರು ಇದರ ವತಿಯಿಂದ ಹತ್ತು ದಿನಗಳ ಕಾಲ ಪತಂಜಲಿ ಯೋಗಪೀಠ ಹರಿದ್ವಾರ, ಪತಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ ನ್ಯೂಸ್ ಉಡುಪಿ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ಸ್ವಾಮಿ ರಾಮ್‌ದೇವ್ ಜಿ ಇವರಿಂದ ಶಿಕ್ಷಣ ಪಡೆದ ಶಿಕ್ಷಕರಿಂದ ಆರೋಗ್ಯ ಭಾಗ್ಯ ಯೋಗ ಶಿಬಿರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲುವಿನ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.

Call us

ಉದ್ಯಮಿ ಪಾಲಾಕ್ಷ ಮೇಸ್ತ ಶಿಬಿರವನ್ನು ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಆಧುನಿಕತೆಯ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಯೋಗ, ದ್ಯಾನ, ಪ್ರಾಣಾಯಾಮಗಳಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದರು.ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಶಿಕ್ಷಕ ಶ್ರೀನಿವಾಸ ಶ್ಯಾನುಭಾಗ್,ಜೆ.ಸಿ.ಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣಕರ್, ಜೇಸಿರೇಟ್ ರೂಪಾ ರೇವಣಕರ್ ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ಸ್ವಾಗತಿಸಿದರು.ಕಾರ್ಯದರ್ಶಿ ಪಾಂಡುರಂಗ ವಂದಿಸಿದರು.

Leave a Reply

Your email address will not be published. Required fields are marked *

five − 1 =