ಶಿರೂರು ಗ್ರಾಮಸಭೆಯಲ್ಲಿ ಗದ್ದಲ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಶಿರೂರು ಗ್ರಾಪಂನ ಪಂಚಾಯತ್ ಸಭಾಭವನದಲ್ಲಿ ನಡೆದ ೨೦೧೭-೧೮ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಅಕ್ಷರಷಃ ಗದ್ದಲ, ಚೀರಾಟ, ಕೂಗಾಟಕ್ಕೆ ಮೀಸಲಾಗಿ ಒಟ್ಟಾರೆ ಗೊಂದಲಗಳ ಗೂಡಾಯಿತು.

Call us

Call us

ಸಭೆಯ ಆರಂಭದಲ್ಲಿ ಕೇವಲ ಮೂರು ಇಲಾಖೆಯ ಅಧಿಕಾರಿಗಳನ್ನು ಹೊತುಪಡಿಸಿ ಉಳಿದ ಅಧಿಕಾರಿಗಳು ಗೈರುಹಾಜರಾದ ಬಗ್ಗೆ ಸಭೆಯಲ್ಲಿ ಆರಂಭಗೊಂಡ ಗದ್ದಲ ಮುಂದುವರಿದು ಕರಾವಳಿ-ದೊಂಬೆ ರಸ್ತೆ ಒತ್ತುವರಿ ತೆರವಿನ ಬಗ್ಗೆ, ಹಡವಿನಕೋಣೆ, ಅಳ್ವೆಗದ್ದೆ, ಕೆಸರಕೊಡಿ ಸಂಪರ್ಕ ರಸ್ತೆ ಅಸಮರ್ಪಕ ಕಾಮಗಾರಿಗಳ ಕುರಿತು, ಅಕ್ರಮವಾಗಿ ನಿರ್ಮಿಣಗೊಂಡ ರಿಕ್ಷಾ ನಿಲ್ದಾಣದ ಶೆಡ್ಡುಗಳ ತೆರವು ಇವೇ ಮೊದಲಾದ ವಿಷಂiiಗಳ ಬಗ್ಗೆ ವಿಶೇಷ ಚರ್ಚೆಯಾಯಿತು. ಕರಾವಳಿ ರಸ್ತೆ ಇಕ್ಕೆಡೆಗಳಲ್ಲಿ ಒತ್ತುವರಿಯಾದ ಬಗ್ಗೆ ಗಮನ ಸೆಳೆದ ನಾಗಪ್ಪ ಮೊಗೇರ, ಈ ಭಾಗದಲ್ಲಿ ಕೃಷಿ ಚಟುವಟಿಕೆ ಮಾಡಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಿ ಸೂಕ್ತ ಚರಂಡಿ ಇಲ್ಲದ ಕಾರಣ ಮಳೆನೀರು ಕೃಷಿ ಭೂಮಿಗೆ ನುಗ್ಗುತ್ತಿದೆ. ಹಿಂದೆ ೧೨ ಮೀ. ಅಗಲದ ರಸ್ತೆ ನಿರ್ಮಾಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದು, ಈಗ ಕೇಲ ೬ ಮೀ. ಮಾತ್ರ ಉಳಿದುಕೊಂಡಿದೆ. ಇದರಿಂದ ವಾಹನ ಸಂಚಾರಕ್ಕೂ ಕಷ್ಟವಾಗುತ್ತಿದೆ. ಈ ಬಗ್ಗೆ ಕಳೆದ ೯ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಗ್ರಾಪಂ ಸದಸ್ಯ ನಾಗಯ್ಯ ಶೆಟ್ಟಿ ನಾಗಪ್ಪ ಮಾತಿಗೆ ಧ್ವನಿಗೂಡಿಸಿ, ೨೦೧೪ರ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕರು ಸಂಬಂಧಪಟ್ಟವರಿಗೆ ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಕೂಡಾ ಯಾವ ಅಧಿಕಾರಿಗಳು ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ೨೦೧೭ಕ್ಕೆ ಜಿಲ್ಲಾಧಿಕಾರಿಯವರು ಈ ಬಗ್ಗೆ ಕೂಲಂಕುಶ ತನಿಖೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಎಂದು ಇಲಾಖೆಗೆ ಆದೇಶ ನೀಡಿದ್ದರೂ ಸಹ ಇದುವರೆಗೆ ಯಾರೊಬ್ಬರು ಮುಂದೆ ಬರಲಿಲ್ಲ ಎಂದರು. ಕೊನೆಗೆ ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ ಎದ್ದುನಿಂತು ಗ್ರಾಮಸಭೆಯ ಈ ನಿರ್ಣಯವನ್ನು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮಂಡಿಸಿ ನಿರ್ಣಯವನ್ನು ತಾಪಂಗೆ ಕಳುಹಿಸಿ. ಅಲ್ಲಿ ಈ ಬಗ್ಗೆ ಅನುಮೋದನೆ ಪಡೆದು ತೆರವು ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದಾದ ನಂತರ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಸೂಕ್ತದಾಖಲೆ ಪರಿಶೀಲಿಸಿ ತೆರವು ಕ್ರಮ ಕೈಗೊಳ್ಳಲು ಪಂಚಾಯತ್ ಅನುಮೋದಿಸುತ್ತದೆ ಎಂದು ಪಿಡಿಓ ಮಂಜುನಾಥ ಶೆಟ್ಟಿ ಮಾಡಿದ ಘೋಷಣೆಯನ್ನು ಗ್ರಾಮಸ್ಥರು ಚಪ್ಪಾಳೆ ಮೂಲಕ ಸ್ವಾಗತಿಸಿದರು.

Call us

Call us

ತೂದಳ್ಳಿ ಕ್ರಾಸ್ ಬಳಿ ಪಂಚಾಯತ್ ಪರವಾನಿಗೆಯಿಲ್ಲದೇ ರಾತ್ರೋರಾತ್ರಿ ಅಕ್ರಮ ರಿಕ್ಷಾ ನಿಲ್ದಾಣ ನಿರ್ಮಿಸಿದ ಬಗ್ಗೆ ಮೋಹನ್ ರೇವಣ್‌ಕರ್ ಮಾಹಿತಿ ನೀಡಿದ್ದು, ಕೆಲಕಾಲ ಸಭೆ ಉದ್ವಿಗ್ನವಾಯಿತು. ಈ ಅಕ್ರಮ ನಿಲ್ದಾಣ ತೆರವುಗೊಳಿಸುವಂತೆ ಪಂಚಾಯತ್ ನೋಟೀಸ್ ನೀಡಿದ್ದು, ಅದನ್ನು ತೆರವುಗೊಳಿಸದ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಹಡವಿನಕೋಣೆ ರಸ್ತೆಯ ಡಾಮರೀಕರಣಕ್ಕೆ ತಯಾರಿ ನಡೆಯುತ್ತಿದ್ದು, ೧೪.೫ ಅಡಿ ಅಗಲವನ್ನು ೧೨ ಅಡಿಗೆ ಇಳಿಸಲಾಗಿದೆ. ಇದಕ್ಕೆ ಆ ಭಾಗದ ಜನರ ವಿರೋಧವಿದ್ದು, ಇದರ ಅಗಲವನ್ನು ಮೊದಲಿದ್ದ ಹಾಗೆ ಡಾಮರಿಕರಣ ಮಾಡಬೇಕು ಇಲ್ಲವಾದರೆ ಕಾಮಗಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಕಚ್ಚಿ ಮಸ್ತಾಕ್ ಹೇಳಿದರು. ಇವರ ಮನವಿಗೆ ಸ್ಪಂದಿಸಿದ ಜಿಪಂ ಸದಸ್ಯ ಸುರೇಶ ಬಟ್ವಾಡಿ, ರಸ್ತೆಯ ಉದ್ದ ಹೆಚ್ಚಿಸುವ ಉದ್ದೇಶದಿಂದ ಅಗಲವನ್ನು ಕಡಿಮೆ ಮಾಡಲಾಗಿದೆ. ಆದರೆ ಈಗ ಮೊದಲಿನ ಸ್ಥಿತಿಯಲ್ಲಿ ರಸ್ತೆ ಡಾಮರೀಕರಣ ಮಾಡಲಾಗುವುದು. ಉಳಿದ ಭಾಗವನ್ನು ಜಿ.ಪಂನಿಂದ ಮಾಡಿಸುವ ಭರವಸೆ ನೀಡಿದರು.

ಒಟ್ಟಾರೆಯಾಗಿ ಕೇವಲ ಸಂಪರ್ಕ ರಸ್ತೆ, ಚರಂಡಿ, ಕೂಡುರಸ್ತೆಗಳ ಸಮಸ್ಯೆಗೆ ಗ್ರಾಮಸಭೆಯ ಹೆಚ್ಚಿನ ಸಮಯ ಮೀಸಲಾಗಿದ್ದು ವಿಶೇಷ. ಬೆರಳೆಣಿಕೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಆರ್‌ಪಿ ಲೋಕೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ನಾಗೇಶ್ ಅಳ್ವೆಗದ್ದೆ ಅಧ್ಯಕ್ಷತೆವಹಿಸಿದ್ದರು. ತಾಪಂ ಸದಸ್ಯ ದಸ್ತಗೀರ್ ಸಾಹೇಬ್, ಗ್ರಾಮ ಕರಣಿಕ ಸತೀಶ್, ಗ್ರಾಪಂ ಸದಸ್ಯರು ಮೊದಲದವರು ಇದ್ದರು. ಶಂಕರ್ ಬಿಲ್ಲವ ಸ್ವಾಗತಿಸಿ ನಿರೂಪಿಸಿದರು.

 

Leave a Reply

Your email address will not be published. Required fields are marked *

12 − 4 =