ಶಿರೂರು ಜಿಪಂ ಕ್ಷೇತ್ರ: ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೇ ಅಭ್ಯರ್ಥಿಗಳಿಗೆ ಸವಾಲು

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಬೈಂದೂರು: ಕುಂದಾಪುರ ತಾಲೂಕಿನ ತುತ್ತ ತುದಿಯ ಊರು ಶಿರೂರು. ಶಿರಭಾಗದ ಊರಾದ ಕಾರಣ ಶಿರೂರು ಎಂಬ ಹೆಸರು ಬಂತು ಎಂದು ಕೆಲವರು ಹೇಳಿದರೆ ಒಂದು ಕಾಲದಲ್ಲಿ ಸಿರಿ ತುಂಬಿದ ಊರಾಗಿದ್ದ ಕಾರಣ ಶಿರೂರು ಎಂದು ಕರೆಯಲಾಯಿತು ಎನ್ನತ್ತಾರೆ. ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಇಷ್ಟು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ನಡೆಯದಿದ್ದರೂ ಗುರುತಿಸಬಹುದಾದ ಕೆಲವು ಅಭಿವೃದ್ಧಿ ಕಾಮಗಾರಿಗಳು ಒಂದಿರಡು ವರ್ಷಗಳ ಈಚೆಗೆ ನಡೆದಿವೆ.
(ಕುಂದಾಪ್ರ ಡಾಟ್ ಕಾಂ ವರದಿ)

Call us

Click Here

Click here

Click Here

Call us

Visit Now

Click here

post-election-voters-Shirurಈ ಭಾರಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಬಂದಿರುವುದರಿಂದ ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ತಾಪಂ ಸದಸ್ಯ ಮದನಕುಮಾರ್ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪಡುವರಿ ಗ್ರಾಪಂ ಹಾಲಿ ಸದಸ್ಯ ಸುರೇಶ್ ಬಟ್ವಾಡಿ ಸ್ವರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದ ಹಾಲಿ ತಾಪಂ ಸದಸ್ಯ ರಾಮ ಕೆ. ಪಕ್ಷದಿಂದ ಟಿಕೇಟ್ ವಂಚಿತರಾಗಿದ್ದರಿಂದ ಶಿರೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ವರ್ಧಿಸುತ್ತಿದ್ದಾರೆ.

ಒಂದು ನೋಟ:
ಗ್ರಾಮೀಣ ಪ್ರದೇಶವೇ ಹೆಚ್ಚಿರುವ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಅರಣ್ಯ ಹಾಗೂ ಕರಾವಳಿ ಭಾಗವನ್ನು ಒಳಗೊಂಡಿದೆ. ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿ ಕ್ಷೇತ್ರಗಳಲ್ಲಿ ಶಿರೂರು ಗುರುತಿಸಿಕೊಂಡಿದೆ. ಇಲ್ಲಿನ ಗ್ರಿನ್ ವ್ಯಾಲಿ ಶಿಕ್ಷಣ ಸಂಸ್ಥೆ ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಹೊಂದಿದೆ. ಪ್ರವಾಸಿ ತಾಣಗಳು ಕೈಬೀಸಿ ಕರೆಯುತ್ತವೆ. ಉಪ್ಪುಂದದಲ್ಲಿ ನಡೆದ ಕಡಲೋತ್ಸವ ಹಾಗೂ ಶಿರೂರಿನ ಶಿರೂರು ಉತ್ಸವ ಈ ಭಾಗದ ಜನರ ಸಾಂಸ್ಕೃತಿಕ ಅಭಿರುಚಿಯನ್ನು ಎತ್ತಿ ಹಿಡಿದಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಕ್ಷೇತ್ರದ ಪ್ರಮುಖ ಕಸುಬು ಮೀನುಗಾರಿಕೆ ಮತ್ತು ಕೃಷಿ. ಮೀನುಗಾರಿಕೆಗೆ ಪೂರಕವಾಗಿ ಬೇಕಾದ ರಸ್ತೆಗಳು ದುಸ್ತರವಾಗಿವೆ. ಉಪ್ಪುಂದ ಭಾಗದ ಕೃಷಿ ಭೂಮಿಗಳಿಗೆ ನುಗ್ಗುವ ಉಪ್ಪುನೀರನ್ನು ತಡೆಯಿಡಿಯಲು ಸೂಕ್ತ ವ್ಯವಸ್ಥೆಗಳೇ ಆಗಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈ ವರೆಗೆ ಕಾಯಕಲ್ಪ ದೊರೆಯದೇ ಪ್ರತಿವರ್ಷವೂ ಕ್ಷೇತ್ರದ ಜನರ ನೀರಿಗಾಗಿ ಪರದಾಟ ನಿಂತಿಲ್ಲ. ಶಿರೂರು ಅಳ್ವೆಗದ್ದೆಯಲ್ಲಿ ಮೀನುಗಾರರಿಗೆ ಜಟ್ಟಿ ಸಮಸ್ಯೆ. ಪ್ರವಾಸೋದ್ಯಮ ಕಡೆಗಣನೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸಮುದ್ರದ ಬದಿಯಲ್ಲಿ ವಾಸಿಸುವ ನೂರಾರು ಕುಟುಂಬಗಳಿಗೆ ಸಿ.ಆರ್.ಝಡ್ ಗೋಳು ತಪ್ಪಿಲ್ಲ. ಮನೆ ನಿರ್ಮಾಣ, ವಿದ್ಯುತ್ ಪಡೆಯಲು ಹರಸಾಹಸ ಪಡುವುದು ನಿಂತಿಲ್ಲ. ಇದು ಕುಂದಾಪ್ರ ಡಾಟ್ ಕಾಂ ವರದಿ

ಪ್ರವಾಸೋದ್ಯಮ ಕಡೆಗಣನೆ:
ಕ್ಷಿತಿಜ ನಿಸರ್ಗಧಾಮ, ಉಪ್ಪುಂದ ಮಡಿಕಲ್ ಕಡಲತೀರ, ಸೋಮೇಶ್ವರ ಬೀಚ್, ಚರ್ಚ್ ಗುಡ್ಡ, ಕ್ಷಿತಿಜ, ನಿಸರ್ಗಧಾಮ ಕೋಣಮಕ್ಕಿ ಜಂಗಲ್ ಫೀರ್ ಧ್ಯಾನಪೀಠ, ಅಳುವೆಗದ್ದೆ ಕಡಲತೀರ ಶಿರೂರು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಆದರೆ ಈ ಎಲ್ಲಾ ತಾಣಗಳೂ ಸಂಪರ್ಕ ಕಲ್ಪಿಸುವ ರಸ್ತೆ ದುಸ್ತರವಾಗಿದ್ದರೇ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳು ಅಭಿವೃದ್ಧಿ ಮಾತ್ರ ಆಗಿಲ್ಲ.Election-shiruru-candidates

Call us

ಸಂಸದರ ಆದರ್ಶ ಗ್ರಾಮದಲ್ಲಿ ಶಿರೂರು ಗ್ರಾಮ:
ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶಿರೂರು ಗ್ರಾಮವನ್ನು ಆಯ್ಕೆಮಾಡಿಕೊಂಡಿದ್ದು, ಈ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಪ್ರಮುಖ ರಸ್ತೆ, ಸೇತುವೆ, ಶೌಚಾಲಯ, ಸಮುದ್ರಕ್ಕೆ ತಡೆಗೋಡೆ, ಕುಡಿಯುವ ನೀರಿನ ಬಗ್ಗೆ ಮೊದಲು ಮುತುವರ್ಜಿ ವಹಿಸಲಾಗಿದೆ. ಕೆಲವು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿದು ಚಾಲನೆಯಲ್ಲಿದ್ದರೇ, ಹಲವು ಇನ್ನೂ ಬಾಕಿ ಇವೆ.

ತಾಲೂಕು ಪಂಚಾಯತ್ ಕ್ಷೇತ್ರಗಳು
ಶಿರೂರು-1 ಶಿರೂರು-2, ಪಡುವರಿ, ಉಪ್ಪುಂದ

ಈ ಹಿಂದಿನ ಜಿಪಂ ಸದಸ್ಯರು
2005 ಮದನ್ ಕುಮಾರ್, 2011 ಗೌರಿ ದೇವಾಡಿಗ

Shiruru ZP constituency (1) Shiruru ZP constituency (2)

Leave a Reply

Your email address will not be published. Required fields are marked *

nineteen + 20 =