ಶಿರೂರು ಜೆ.ಸಿ.ಐ: ಉಚಿತ ಅಕ್ಯೂಪ್ರಶರ್ ತೆರಪಿ ಚಿಕಿತ್ಸಾ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಶಿರೂರು: ಜೆ.ಸಿ.ಐ ಶಿರೂರು ಇದರ ವತಿಯಿಂದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ್ ಅಕ್ಯೂಪ್ರೆಶರ್ ಪೈನಿಂಗ್ ಮತ್ತು ರೀಸರ್ಚ್ ಸೆಂಟರ್ ರಾಜಸ್ಥಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಉಚಿತ ಅಕ್ಯೂಪ್ರಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಉದ್ಯಮಿ ನಾಗಶ್ರೀ ಧತ್ತಿನಿದಿ ಪ್ರತಿಷ್ಠಾನ ಟ್ರಸ್ಟಿ ಮಂಜುನಾಥ ಬಿಲ್ಲವ ಮುಂಬ್ಯೆ ಕಾರ್ಯಕ್ರಮ ಉದ್ಘಾಟಿಸಿದರು.

Call us

Call us

Call us

ಈ ಸಂಧರ್ಭದಲ್ಲಿ ಮಾತನಾಡಿ ಜೆ.ಸಿ.ಐ ಸಂಸ್ಥೆ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಇಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಲಿ ಸಾರ್ವಜನಿಕರು ಇದರ ಉಪಯೋಗ ಪಡೆಯುವಂತಾಗಲಿ ಎಂದರು. ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ಪ್ರಧಾನ ಪ್ರಾಯೋಜಕರಾದ ಗುತ್ತಿಗೆದಾರ ಕ್ಲೆಮೆಂಟ್ ರೋಡ್ರಿಗಸ್‌ರವರನ್ನು ಸಮ್ಮಾನಿಸಲಾಯಿತು.

Leave a Reply

Your email address will not be published. Required fields are marked *

eighteen + thirteen =