ಶಿರೂರು: ನಿವೇಶನ ಸ್ಥಳ ಮಂಜೂರು ಮಾಡಲು ಒತ್ತಾಯಿಸಿ ಹೋರಾಟ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಶಿರೂರು ಗ್ರಾಮದ ಬಡ ನಿವೇಶನ ರಹಿತರು ನಿವೇಶನ ಸ್ಥಳ ಮಂಜೂರು ಮಾಡಲು ಒತ್ತಾಯಿಸಿ ಶಿರೂರು ಗ್ರಾಮ ಪಂಚಾಯತ್ ಕಛೇರಿ ಮುತ್ತಿಗೆ ಹೋರಾಟ ಕಾರ್ಯಕ್ರಮ ಗುರುವಾರ ನಡೆಯಿತು.

Call us

Call us

Call us

ಸ್ವಂತ ಮನೆ, ಭೂಮಿ ಇಲ್ಲದ, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಒಂದೇ ಮನೆಯ ಸೂರಿನಡಿಯಲ್ಲಿ ೨-೩ ಕುಟುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ವಾಸವಾಗಿರುವ ಬಡ ನಿವೇಶನ ರಹಿತ ೧೧೬೦ ಅರ್ಜಿದಾರರು ನಿವೇಶನ ಕೋರಿ ಸಲ್ಲಿಸಿದ ಅರ್ಜಿಗಳನ್ನು ಈ ಕೂಡಲೇ ಅರ್ಹ ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ಅದಕ್ಕನುಗುಣವಾಗಿ ಎಷ್ಟು ಸರಕಾರಿ ಜಮೀನು ನಿವೇಶನಕ್ಕಾಗಿ ಮಂಜೂರು ಮಾಡಲು ಬೇಕು ಎಂಬುದಕ್ಕೆ ಬೈಂದೂರು ತಹಶೀಲ್ದಾರರವರಿಗೆ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಪ್ರಸ್ಥಾವನೆಯನ್ನು ಸಲ್ಲಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಶಿರೂರು ಗ್ರಾಮ ಪಂಚಾಯತ್ ಕಛೇರಿ ಬಳಿ ಜರುಗಿದ ಮನೆ, ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದಲ್ಲಿ ಸ್ಥಳೀಯಾಡಳಿತವನ್ನು ಒತ್ತಾಯಿಸಿದರು.

Call us

Call us

Leave a Reply

Your email address will not be published. Required fields are marked *

eight + 14 =