ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಪ್ರಕರಣವೊಂದರ ವಕಾಲತ್ತು ಸಂಬಂಧ ವಕೀಲರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆ ಶಿರೂರಿನಲ್ಲಿ ನಡೆದಿದೆ.
ಬೈಂದೂರು ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಗಣೇಶ್ ಮೇಸ್ತ ಎಂಬುವವರು ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರೂರಿನ ಮೇಸ್ತ ಸಮುದಾಯಕ್ಕೆ ಸಂಬಂಧಿಸಿ ಬೈಂದೂರು, ಕುಂದಾಪುರ ಹಾಗೂ ಹೈಕೋರ್ಟ್ ನಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಒಂದು ತಂಡದ ಪರವಾಗಿ ಗಣೇಶ್ ಮೇಸ್ತ ವಕಾಲತ್ತು ಮಾಡುತ್ತಿದ್ದರು. ಆಗಸ್ಟ್ 16ರ ಬುಧವಾರ ಆಟಿ ಅಮವಾಸ್ಯೆ ಪ್ರಯುಕ್ತ ಶಿರೂರಿನ ಕೋಟೆಮನೆ ದುರ್ಗಾಂಬಿಕೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲೆಂದು ವಕೀಲ ಗಣೇಶ ಮೇಸ್ತ ಹೋಗಿದ್ದರು. ಈ ಸಂದರ್ಭ ಮಧ್ಯಾಹ್ನ 12 ಗಂಟೆಗೆ ವಕೀಲರ ಎದುರು ಪಾರ್ಟಿಗಳ ಪೈಕಿ ನವೀನ್ ಮೇಸ್ತ, ಕೆ.ಎನ್.ಆಚಾರ್, ಶ್ರೀಧರ್ ಮೇಸ್ತ, ಗಿರೀಶ್ ಮೇಸ್ತ, ಸುಧಾಕರ ಮೇಸ್ತ, ಅಣ್ಣಪ್ಪ ವಿ ಮೇಸ್ತ, ಪ್ರಕಾಶ್ ವಿ ಮೇಸ್ತ, ರಾಘವೇಂದ್ರ ಗಣಪತಿ ಮೇಸ್ತ, ಚಂದ್ರಶೇಖರ ಮೇಸ್ತ ಸೇರಿದಂತೆ 11 ಜನರ ತಂಡ ಏಕಾಏಕೀ ಹಲ್ಲೆ ನಡೆಸಿ, ಜೇಬಿನಲ್ಲಿದ್ದ 5 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು, ಕೊಲೆ ಬೆದರಿಕೆ ಹಾಕಿದೆ ಎಂದು ಹಲ್ಲೆಗೊಳಗಾದ ಗಣೇಶ್ ಹೇಳಿದ್ದಾರೆ.
- ಘಟನೆ ನಡೆದು 12 ಗಂಟೆಗಳಾದರೂ ಪೊಲೀಸರು ಎಫ್.ಐ.ಆರ್. ಮಾಡಿಲ್ಲ. ಗಾಯಾಳು ವಕೀಲರ ಹೇಳಿಕೆ ಪಡೆದಿಲ್ಲ. ಯಾವುದೇ ಒತ್ರಡಕ್ಕೆ ಮಣಿಯದೇ ಆರೋಪಿಗಳನ್ನು ತಕ್ಷಣ ಬಂಧಿಸಬೇಕು – ಮೋಬಿ ಪಿ.ಸಿ, ಅಧ್ಯಕ್ಷರು ಬೈಂದೂರು ವಕೀಲರ ಸಂಘ
- ವಕೀಲರ ಮೇಲೆ ನಿರಂತರ ದೌರ್ಜನ್ಯಗಳಾಗುತ್ತಿರುವುದು ಖಂಡನೀಯ. ತಕ್ಷಣ ಆರೋಪಿಗಳನ್ನು ಬಂಧಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು – ಪ್ರಶಾಂತ ಪೂಜಾರಿ, ಕಾರ್ಯದರ್ಶಿ ಬೈಂದೂರು ವಕೀಲರ ಸಂಘ
ಇದನ್ನೂ ಓದಿ:
► ಶಾಲೆಗೆ ನಿರಂತರ ಗೈರಾಗುತ್ತಿದ್ದ ಶಿಕ್ಷಕ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮಾನತು – https://kundapraa.com/?p=68431 .