ಶಿರೂರು: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ 1.94ಕೋಟಿ ರೂ. ಅನುದಾನದಲ್ಲಿ ಶಿರೂರು ಪೇಟೆ, ದೊಂಬೆ ಅಡ್ಡರಸ್ತೆ ಕಾಮಗಾರಿ ಹಾಗೂ ಹಡವಿನಕೋಣೆ ರಸ್ತೆ ಅಭಿವೃದ್ಧಿಗೆ ಮಂಜೂರಾದ 70 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

Call us

ಈ ನಡುವೆ ಸಂಸದ ಮತ್ತು ಶಾಸಕರ ವಿಶೇಷ ಮುತುವರ್ಜಿಯಿಂದ ಮಂಜೂರಾದ ಶಿರೂರು ಕೋಟೆಮನೆ ಬಳಿ ಸಂಕದಗುಂಡಿ ವೆಂಟೆಡ್ ಡ್ಯಾಂ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ. ಎಂ ಸುಕುಮಾರ ಶೆಟ್ಟಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ಶಂಕರ ಪೂಜಾರಿ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಲೂಕು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಡಿ, ತಾ.ಪಂ ಸದಸ್ಯ ಮೌಲಾನ ದಸ್ತಗೀರ್, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಉಮೇಶ್ ಶೆಟ್ಟಿ ಕಲ್ಗದ್ದೆ, ಮಹಿಳಾ ಮೋರ್ಚಾದ ಪ್ರಿಯದರ್ಶಿನಿ ಬೆಸ್ಕೂರ್, ಭಾಗೀರಥಿ, ಗ್ರಾ.ಪಂ ಸದಸ್ಯರಾದ ಪ್ರಸನ್ನ ಶೆಟ್ಟಿ ಕರಾವಳಿ, ಚಂದ್ರಾವತಿ, ಪದ್ಮಾವತಿ, ಪರಮೇಶ್ವರ ಪೂಜಾರಿ, ಶಂಕರ ಡಿ. ಮೇಸ್ತ, ರವೀಂದ್ರ ಶೆಟ್ಟಿ ಆರ‍್ಮಕ್ಕಿ, ಸಂಧ್ಯಾ ವಿಶ್ವನಾಥ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

4 × 5 =