ಶಿರೂರು: ಹಾಡುಹಗಲೇ ಮನೆಯ ಬಾಗಿಲು ಮುರಿದು ದರೋಡೆ

Call us

ಬೈಂದೂರು: ಯಾರೂ ಇಲ್ಲದ ಸಮಯದಲ್ಲಿ ಹಾಡುಹಗಲೇ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ಶಿರೂರು ಗ್ರಾಪಂ ವ್ಯಾಪ್ತಿಯ ನೀರ್‌ಗದ್ದೆಯಲ್ಲಿ ಮಂಗಳವಾರ ನಡೆದಿದೆ.

Call us

Call us

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಯ್ಯಾಡಿ ಶಾಖೆಯ ಉದ್ಯೋಗಿ ಚಂದ್ರ ಮೊಗವೀರ ಎಂಬುವರ ಮನೆಗೆ ಮಧ್ಯಾಹ್ನ ನುಗ್ಗಿದ ಕಳ್ಳರು ಪಿಕಾಸಿನಿಂದ ಪ್ರಧಾನ ದ್ವಾರ ಹಾಗೂ ಎರಡು ಕಪಾಟುಗಳ ಬೀಗ ಮುರಿದು ಸಮಾರು 12 ಪವಾನ್ ಚಿನ್ನಾಭರಣ ಹಾಗೂ ರೂ.8 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಚಂದ್ರ ಮೊಗವೀರ ಅವರ ಪತ್ನಿಯೂ ಕೂಡಾ ಶಿಕ್ಷಕಿಯಾಗಿದ್ದು, ಇಬ್ಬರೂ ಕೆಲಸಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಎಂದಿನಂತೆ ಮಧ್ಯಾಹ್ನ ಶಿಕ್ಷಕಿ ಊಟಕ್ಕೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಮನೆಯಲ್ಲಿನ ವಸ್ತುಗಳು ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದ್ದು ಕಂಡುಬಂದಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಭೇಟಿನೀಡಿದ್ದು, ಬೈಂದೂರು ವೃತ್ತ ನೀರಿಕ್ಷಕ ಸುದರ್ಶನ್ ಮುದ್ರಾಡಿ, ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಸ್ಥಳ ಪರೀಶೀಲನೆ ನಡೆಸಿದರು. ಉಡುಪಿಯಿಂದ ಆಗಮಿಸಿದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Call us

Call us

  • ಜನನಿ ಉಪ್ಪುಂದ

Leave a Reply

Your email address will not be published. Required fields are marked *

five − 5 =