ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ನಾರಾಯಣ ಗುರುಗಳ ೧೬೩ನೇ ಜನ್ಮ ದಿನಾಚರಣೆಯನ್ನು ಅರ್ಥಗರ್ಬಿತವಾಗಿ ಆಚರಿಸಲಾಯಿತು. ಶ್ರೀ ಗುರುಗಳ ಶ್ರೀರಕ್ಷೆ ಬೇಡುತ್ತಾ ಪುಷ್ಪ ನಮನ ಸಲ್ಲಿಸಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋವಿಂದರಾಜು ಇವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಶಾಲೆಯ ಸಂಸ್ಥಾಪಕರಾದ ಡಾ|. ಎನ್.ಕೆ.ಬಿಲ್ಲವ ಸಭಾಧ್ಯಕ್ಷತೆ ವಹಿಸಿ ಶ್ರೀ ಗುರುಗಳನ್ನು ಸ್ಮರಿಸಿ ಗುರುಗಳ ಜೀವನ ಶೈಲಿಯನ್ನು ತಿಳಿಸಿದರು. ಈ ಸಭೆಯಲ್ಲಿ ಗೋಪಾಲ ಕೆ. ಪೂಜಾರಿ ಗೌರವಾಧ್ಯಕ್ಷರು ಬಿಲ್ಲವ ಸಮಾಜ ಸೇವ ಸಂಘ ನಾವುಂದ, ಶೇಖರ ಪೂಜಾರಿ ಉಪಾಧ್ಯಕ್ಷರು. ಶ್ರೀ ಗುರು ನಿತ್ಯಾನಂದ ಕೋ. ಆಪರೇಟಿವ್ ಸೊಸೈಟಿ ಅರೆಹೊಳೆ, ಸುರೇಶ್ ಪೂಜಾರಿ ನಿರ್ದೇಶಕರು ಶ್ರೀ ಗುರು ನಿತ್ಯಾನಂದ ಕೋ. ಆಪರೇಟಿವ್ ಸೊಸೈಟಿ ಅರೆಹೊಳೆ, ಸಾವಿತ್ರಿ ನಿರ್ದೇಶಕರು ಶ್ರೀ ಗುರು ನಿತ್ಯಾನಂದ ಕೋ. ಆಪರೇಟಿವ್ ಸೊಸೈಟಿ ಅರೆಹೊಳೆ, ಶಂಕರ ಪೂಜಾರಿ ಸಂಚಾಲಕರು ಹಾಗೂ ಅರುಣ ಬಿ ಪೂಜಾರಿ ಆಡಳಿತಾಧಿಕಾರಿ ಶುಭದಾ ಶಾಲೆಗಳು ಕಿರಿಮಂಜೇಶ್ವರ. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ಗೋವಿಂದರಾಜು ಉಪಸ್ಥಿತರಿದ್ದರು. ಎಮ್.ಜಿ ಬಾನಾವಳಿಕರ್ ಮುಖ್ಯೋಪಾಧ್ಯಾಯರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕಿ ಆಯಿಷಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಗೀತಾದೇವಿ ವಂದಿಸಿದರು.

Call us

Call us

Visit Now

Leave a Reply

Your email address will not be published. Required fields are marked *

seventeen + 17 =