ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಕೋ ಕ್ಲಬ್ನ ಸಹಯೋಗದೊಂದಿಗೆ ವಿವಿಧ ಸಂಘಗಳನ್ನು ಖಂಬದಕೋಣೆ ವಲಯ ಶಿಕ್ಷಣ ಸಂಯೋಜಕ ವೆಂಕಪ್ಪ ಉದ್ಘಾಟಿಸಿದರು.
ಶಾಲೆಯೆಂದರೆ ಚಟುವಟಿಕೆಗಳ ಒಂದು ಮಹಾನದಿ ಇದ್ದಂತೆ. ಇಲ್ಲಿ ಕೊಡುವ ಪ್ರತಿಯೊಂದು ಆಧ್ಯತೆಗಳು, ವಿಷಯಗಳು ಹನಿ ಹನಿಯಾಗಿ ಜೊತೆಗೂಡಿ ಜ್ಞಾನ ಸಾಗರವನ್ನು ಸೇರುತ್ತದೆ. ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳನ್ನು ವಿವಿಧ ಸಂಘಗಳು ಮುಖ್ಯವಾಗಿರುತ್ತದೆ ಎಂದರು.
ಸಾಂಸ್ಕ್ರತಿಕ, ಸಾಹಿತ್ಯಿಕ, ಕ್ರೀಡಾ, ಭಾಷಾ , ಕಲೆ ಮತ್ತು ಲಲಿತ ಕಲೆಗಳ ಸಂಘಗಳನ್ನು ಅನಾವರಣಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಶಿಕ್ಷಕಿ ಮಮತಾ ಪೂಜಾರಿ ವಹಿಸಿಕೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ ಸಂಘದ ಸಲಹಾಗಾರರಾಗಿ, ಸಂಯೋಜಕರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ಸಂಸ್ಥಾಪಕರಾದ ಡಾ.ಎನ್.ಕೆ.ಬಿಲ್ಲವ ರವರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಉದ್ಘಾಟಿತ ಸಂಘಗಳ ಪ್ರತಿನಿಧಿಯಾಗಿ ಒಬ್ಬೊಬ್ಬ ವಿದ್ಯಾರ್ಥಿಯನ್ನು ಆಯ್ಕೆಮಾಡಲಾಯಿತು. ಶಿಕ್ಷಕಿ ವಂದನ ರವರು ನಿರ್ವಹಿಸಿದರು. ಶಿಕ್ಷಕಿ ಸಂಗೀತಾ ಬಿಲ್ಲವ ಸ್ವಾಗತಿಸಿ ಶಿಕ್ಷಕ ಶಂಶುದ್ಧೀನ್ ವಂದಿಸಿದರು.